ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಜಪಾನ್ ಭೇಟಿ ರದ್ದುಗೊಳ್ಳುವ ಸಂಭವ ಹೆಚ್ಚಾಗಿದೆ. ಇವರ ಭೇಟಿಗೆ ಜಪಾನ್ನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಜಪಾನ್ ಭಾರತದ ಬೆನ್ನಿಗೆ ನಿಂತಿದೆ. ಆದರೆ, ಚೀನಾ ಅಧ್ಯಕ್ಷರ ಪ್ರವಾಸ ರದ್ದಾಗಲು ಇದು ಕಾರಣವಲ್ಲ. ಬದಲಿಗೆ ಹಾಂಕಾಂಗ್ನಲ್ಲಿ ಚೀನಾ ಜಾರಿಗೊಳಿಸಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ವಶ; ಐವರ ಬಂಧನ
ಕರೋನಾ ಪಿಡುಗು ಜಾಗತಿಕವಾಗಿ ವ್ಯಾಪಿಸದಿದ್ದರೆ ಕ್ಸಿ ಜಿನ್ಪಿಂಗ್ ಏಪ್ರಿಲ್ನಲ್ಲೇ ಜಪಾನ್ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಸರಿಯಾಗಿ ಅದೇ ವೇಳೆಗೆ ಪಿಡುಗು ಹೆಚ್ಚಾಗಿದ್ದರಿಂದ, ಅವರ ಪ್ರವಾಸ ರದ್ದಾಗಿತ್ತು. ಇದೀಗ ಅದು ಆಗಸ್ಟ್ಗೆ ಮರುನಿಗದಿಯಾಗಲಿತ್ತು. ಆದರೆ, ಜಪಾನ್ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸದಸ್ಯರೇ ಜಿನ್ಪಿಂಗ್ ಭೇಟಿಗೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹಾಂಕಾಂಗ್ನಲ್ಲಿ ಚೀನಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದರಿಂದ ಹಾಂಕಾಂಗ್ನಲ್ಲಿರು ಜಪಾನ್ನ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳ ಸುಗಮ ಕಾರ್ಯಾಚರಣೆಗೆ ಚೀನಾದ ಈ ಕಾನೂನು ಅಡ್ಡಿಯಾಗುತ್ತದೆ ಎಂಬುದು ಇವರೆಲ್ಲರ ಆತಂಕವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜಿನ್ಪಿಂಗ್ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಜಪಾನ್ನ ಪ್ರಧಾನಿ ಶಿನ್ಜೋ ಅಬೆ, ಜಿನ್ಪಿಂಗ್ ಅವರ ಪ್ರವಾಸವನ್ನೇ ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.