More

    ಅವಧಿಗೂ ಮುನ್ನ ಜನಿಸಿದ್ದ ಆನೆ ಮರಿ ಸಾವು

    ಮುಂಡಗೋಡ: ತಾಲೂಕಿನ ಗುಂಜಾವತಿ ಗ್ರಾಮ ಪಂಚಾಯಿತಿಯ ಬಾಳೆಹಳ್ಳಿ ಅರಣ್ಯ ಪ್ರದೇಶದಲ್ಲಿ ಅವಧಿಗೂ ಮುನ್ನ ಜನಿಸಿದ್ದ ಕಾಡಾನೆ ಮರಿಯೊಂದು ಬುಧವಾರ ರಾತ್ರಿ ಮೃತಪಟ್ಟಿದೆ.

    ಇಲ್ಲಿನ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಇಲ್ಲಿಯೇ ಬೀಡು ಬಿಟ್ಟಿದ್ದವು. ಈ ಹಿಂಡಿನಲ್ಲಿದ್ದ ಒಂದು ಆನೆ ಅವಧಿಗೂ ಮುನ್ನ ಗಂಡು ಮರಿಗೆ ಜನ್ಮ ನೀಡಿದೆ. 12 ತಿಂಗಳ ಗಂಡು ಮರಿ ಇದಾಗಿದೆ. ಆನೆಯು ಮರಿಗೆ ಜನ್ಮ ನೀಡುವ ವೇಳೆ ಕಿರುಚಾಡಿದ ಶಬ್ದ ಅರಣ್ಯದ ಅಂಚಿನಲ್ಲಿರುವ ಗ್ರಾಮಸ್ಥರಿಗೆ ಕೇಳಿಸಿದೆ. ಬೆಳಗ್ಗೆ ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಅರಣ್ಯಕ್ಕೆ ಹೋಗಿ ದೂರದಿಂದ ನೋಡಿದ್ದಾರೆ. ಉಗ್ಗಿನಕೇರಿಗೆ ತೆರಳುವ ಮಾರ್ಗದಿಂದ 100 ಮೀ. ಅಂತರದಲ್ಲಿ ಮರಿಯಾನೆಯ ಕಳೇಬರವಿತ್ತು. ಅದರ ಸುತ್ತ ಜನ್ಮ ನೀಡಿದ ದೊಡ್ಡ ಆನೆ ಓಡಾಡುತ್ತಿತ್ತು. ಕೆಲ ಹೊತ್ತಿನ ಬಳಿಕ ದೊಡ್ಡ ಆನೆ ಬೇರೆಡೆ ತೆರಳಿದ ನಂತರ ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಮರಿಯಾನೆ ಅವಧಿಗೂ ಮುನ್ನ ಜನಿಸಿದ್ದು ಎಂದು ತಿಳಿದು ಬಂದಿದೆ. ಅಲ್ಲದೆ, ಪ್ರಸವದ ವೇಳೆ ಆನೆ ಒದ್ದಾಡಿದ ಜಾಗದಲ್ಲಿ ಗಿಡ-ಗಂಟಿಗಳು ಮುರಿದಿವೆ. ಆನೆ ತನ್ನ ಮರಿಯನ್ನು ತೆಗೆದುಕೊಂಡು ಹೋಗಲು ಸೊಂಡಿಲಿನಿಂದ ಎಳೆದಾಡಿರುವ ದೃಶ್ಯ ಕಂಡುಬಂದಿದೆ. ಕಾರ್ಯಕ್ರಮ ನಿಮಿತ್ತ ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಶಿವರಾಮ ಹೆಬ್ಬಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಾಮಾನ್ಯವಾಗಿ ಆನೆಗಳು ಪ್ರಸವವಾಗಲು ಕನಿಷ್ಠ 20 ರಿಂದ 22 ತಿಂಗಳು ಬೇಕು. ಆದರೆ, ಈ ಮರಿಯಾನೆ ಸುಮಾರು 12 ತಿಂಗಳು ತುಂಬಿದ್ದು ಗಂಡು ಆನೆಯಾಗಿದೆ. ಮರಿಯಾನೆ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುವುದು. | ಶ್ರೀಶೈಲ ವಾಲಿ ಎಸಿಎಎಫ್ ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts