ಹೈದರಾಬಾದ್: ಟಾಲಿವುಡ್ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ನಟನೆಯ ಲೇಡಿ ಓರಿಯೆಂಟೆಡ್ ಬ್ಲಾಕ್ ಬಸ್ಟರ್ ಸಿನಿಮಾ ಯಾವುದು ಎಂದು ಸಿನಿ ರಸಿಕರನ್ನು ಪ್ರಶ್ನೆ ಮಾಡಿದರೆ ಥಟ್ಟನೆ ‘ಅರುಂಧತಿ’ ಎಂದು ಹೇಳುತ್ತಾರೆ. ಎಲ್ಲಾ ಭಾಷಿಗರು ಸಿನಿಮಾವನ್ನು ನೋಡಿ, ಹಾಡಿ ಹೊಗಳಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನ ಮಾಡಿದರು. 2009ರಲ್ಲಿ ಬಿಡುಗಡೆಯಾದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ, ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿತು. ಈ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತು ಎನ್ನಬಹುದು.
ಇನ್ನೂ ಈ ಚಿತ್ರದಲ್ಲಿ ನಟ ಸೋನು ಸೂದ್, ಅರ್ಜುನ್ ಬಾಜ್ವಾ ಮತ್ತು ಶಾಯಾಜಿ ಶಿಂಧೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಪಶುಪತಿಯಾಗಿ ಸೋನು ಸೂದ್ ಮತ್ತು ಜೇಜಮ್ಮಳಾಗಿ ಅನುಷ್ಕಾ ಈ ಸಿನಿಮಾದ ಹೈಲೈಟ್ಸ್. ಮೇಲಾಗಿ ಅನುಷ್ಕಾ ಅಭಿನಯಕ್ಕೆ ಪ್ರೇಕ್ಷಕರಿಂದ ಒಳ್ಳೆ ಮಾರ್ಕ್ಸ್ ಸಿಕ್ಕಿದೆ. ಈ ಚಿತ್ರ ತೆರೆ ಮೇಲೆ ಬಿಡುಗಡೆಯಾದಾಗಲೆಲ್ಲ ಅತ್ಯುತ್ತಮ ರೇಟಿಂಗ್ ಹಾಗೂ ರೆಸ್ಪಾನ್ಸ್ ಪಡೆಯುತ್ತಿರುವುದು ಗೊತ್ತೇ ಇದೆ. ಅಂದಹಾಗೆ ಅರುಂಧತಿ ಚಿತ್ರದಲ್ಲಿ ಅನುಷ್ಕಾ ಅವರ ಬಾಲ್ಯದ ಪಾತ್ರ ಎಲ್ಲರಿಗೂ ನೆನಪಿರುತ್ತದೆ. ಆ ಬಾಲ ನಟಿ ಈಗ ಹೇಗಿದ್ದಾರೆ ಎಂಬುದನ್ನು ತಿಳಿದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ.
ಅರುಂಧತಿ ಸಿನಿಮಾ ನೋಡಿದವರು ಅನುಷ್ಕಾ ಅವರ ಬಾಲ್ಯದ ಪಾತ್ರವನ್ನು ಮರೆಯುವುದಿಲ್ಲ. ಬಾಲನಟಿ ತುಂಬಾ ಅದ್ಭುತವಾಗಿ ನಟನೆ ಮಾಡಿದರು. ಹೀಗಾಗಿಯೇ ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ಪ್ರಶಂಸೆಯೂ ಸಿಕ್ಕಿತು. ಅಷ್ಟಕ್ಕೂ ಆ ಬಾಲ ಕಲಾವಿದೆಯ ಹೆಸರು ಏನು ಅಂದರೆ ‘ದಿವ್ಯಾ ಗಣೇಶ್’. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ಬಾಲನಟಿಯಾಗಿ ರಂಜಿಸಿದ್ದಾರೆ. ಆದರೆ, ಅರುಂಧತಿ ಸಿನಿಮಾದಿಂದ ಮಾತ್ರ ಒಳ್ಳೆಯ ಮನ್ನಣೆ ಸಿಕ್ಕಿತ್ತು. ಈ ಚಿತ್ರವು ದಿವ್ಯಾ ಗಣೇಶ್ ಅವರ ವೃತ್ತಿಜೀವನದಲ್ಲಿ ಮರೆಯಲಾಗದ ಚಿತ್ರವಾಗಿದೆ.
ದಿವ್ಯಾ ಅವರು ಅನೇಕ ಚಲನಚಿತ್ರಗಳು ಮತ್ತು ವಾಣಿಜ್ಯ ಜಾಹೀರಾತುಗಳನ್ನು ಮಾಡಿದ್ದಾರೆ. ಆದರೆ, ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ದಿವ್ಯಾ ನಾಗೇಶ್ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಾಲ್ಯದಲ್ಲಿ ರಂಜಿಸಿರುವ ದಿವ್ಯಾ ಈಗ ನಾಯಕಿಗಿಂತಲೂ ಮಿಗಿಲಾದ ಸೌಂದರ್ಯದಿಂದ ಎಲ್ಲರನ್ನೂ ನಿಬ್ಬೆರಗಾಗಿಸುತ್ತಿದ್ದಾರೆ. ಇದಲ್ಲದೆ, ಶೀಘ್ರದಲ್ಲೇ ಸಿನಿ ಉದ್ಯಮಕ್ಕೆ ಮರಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.
ದಿವ್ಯಾ ಗಣೇಶ್ ಅವರು ಮಲಯಾಳಂ ಮತ್ತು ತಮಿಳಿನಲ್ಲಿ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರಂತೆ. ತೆಲುಗಿನಲ್ಲಿ ನಾಯಕಿಯಾಗಿ ನಟಿಸಲು ರೆಡಿಯಾಗಿದ್ದಾರೆಯಂತೆ. ಸದ್ಯ, ದಿವ್ಯಾ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ. ಇವರನ್ನು ನೋಡಿದ ನೆಟ್ಟಿಗರು ದಿವ್ಯಾ ಈಗ ತುಂಬಾ ಸುಂದರವಾಗಿದ್ದಾರೆ, ನಾಯಕಿಯರನ್ನು ಮೀರಿ ತನ್ನ ಸೌಂದರ್ಯದಿಂದ ಎಲ್ಲರ ಮನಸೆಳೆದಿದ್ದಾರೆ, ನಾಯಕಿಯಾಗಿ ಪ್ರಯತ್ನಿಸಬೇಕು ಎಂದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಸ್ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಬೇಸಿಗೆ ಬಿಸಿ ತಣಿಸಲು ಪೆಟ್ರೋಲ್ ಬಂಕ್ ಮಾಲೀಕನ ಐಡಿಯಾಗೆ ಫಿದಾ! ಬಂಕ್ ಮುಂದೆ ಜನವೋ ಜನ
ಅಂಕಲ್ನನ್ನು ಮದುವೆಯಾದ ಯುವತಿ! ನಿನ್ನ ನಗು ನೋಡೋಕಾಗ್ತಿಲ್ಲ ಅಂದ್ರು ನೆಟ್ಟಿಗರು