ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ತಂಡ ಡಬ್ಲ್ಯುಪಿಎಲ್ ಟ್ರೋಫಿ ಜಯಿಸಿ ಎರಡು ವಾರಗಳೇ ಕಳೆದಿವೆ. ಮಹಿಳಾ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಯಲ್ಲೇ ಈ ಮೈಲಿಗಲ್ಲು ಸ್ಥಾಪಿಸಿದೆ. ಪುರುಷರ ಐಪಿಎಲ್ ಟೂರ್ನಿ ಆರಂಭವಾಗಿ ಎರಡು ವಾರ ಕಳೆದರೂ ಆರ್ಸಿಬಿ ಮಹಿಳಾ ತಂಡದ ಟ್ರೋಫಿಯನ್ನು ಮುಂದಿಟ್ಟು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡುತ್ತಿರುವುದು ಮುಂದುವರಿದಿದೆ.
ಡಬ್ಲ್ಯುಪಿಎಲ್ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾ ಪುರುಷರ ತಂಡವನ್ನು ತಮಾಷೆ ಮಾಡುತ್ತಿರುವಂತೆ ಕಾಣುತ್ತದೆ.
ಪುರುಷರ ತಂಡವನ್ನು ಅಣಕಿಸಿದ ಮಹಿಳಾ ತಂಡ
ಡಬ್ಲ್ಯುಪಿಎಲ್ ಫೈನಲ್ ಬಳಿಕ ಸ್ಮೃತಿ ಮಂದಾನ ಅವರ ಆ್ಯಂಕರ್ಗಳ ಗುಂಪಿನ ಜತೆ ಸಂಭಾಷಣೆ ನಡೆಸುತ್ತಿರುತ್ತಾರೆ. ಈ ವೇಳೆ ಸ್ಮೃತಿ ಅವರು ವಿರಾಟ್ ಕೊಹ್ಲಿ ಅವರ ಸಾಧನೆಗಳ ಬಗ್ಗೆ ಮಾತನಾಡುತ್ತಾ ಅವರು ಸಾಧಿಸಲು ಇನ್ನೇನು ಉಳಿದಿದೆ ಎಂದು ಪ್ರಶ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಸಿಬಿ ತಂಡದ ಸಹ ಆಟಗಾರ್ತಿಯೊಬ್ಬರು ಮಧ್ಯಪ್ರವೇಶಿಸಿ ಐಪಿಎಲ್ ಟ್ರೋಫಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ಸಂಭಾಷಣೆ ನಿಲ್ಲುತ್ತದೆ ಮತ್ತು ಸ್ಮೃತಿ ಮಂದಾನ ಸೇರಿ ಆ್ಯಂಕರ್ಗಳೆಲ್ಲರು ನಗುತ್ತಾರೆ. ಕೊಹ್ಲಿ ಹೆಸರೇಳುತ್ತಿದ್ದಂತೆ ಟ್ರೋಫಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದನ್ನು ನೋಡಿ ನೆಟ್ಟಿಗರು ಕೊಹ್ಲಿಯನ್ನು ಮಹಿಳಾ ತಂಡ ಅಣಕಿಸಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
RCB Women’s trollinh Virat, WTF? pic.twitter.com/cwJ1rWbb5j
— 𝐒𝐞𝐫𝐠𝐢𝐨 (@SergioCSKK) March 30, 2024
ಇದಿಷ್ಟೇ ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಕೊಹ್ಲಿ ಕಾಲೆಳೆಯುತ್ತಿದ್ದಾರೆ. ತನ್ನ ಮಹಿಳಾ ತಂಡದ ಆಟಗಾರರಿಂದಲೇ ಕೊಹ್ಲಿಗೆ ಅವಮಾನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ.
ಇನ್ನೂ ಪ್ರಸಕ್ತ ಸೀಸನ್ನಲ್ಲಿ ಆರ್ಸಿಬಿ ತಂಡ ಮೊದಲ ಪಂದ್ಯವನ್ನು ಸಿಎಸ್ಕೆ ಜತೆ ಎದುರಿಸಿ ಸೋಲುಂಡಿತು. ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ದಾಖಲಿಸಿತು. ಆದರೆ ಮೂರನೇ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ಮತ್ತೆ ಸೋಲುಂಡಿತು. ನಾಳೆ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ತನ್ನ ನಾಲ್ಕನೇ ಪಂದ್ಯವನ್ನು ಆರ್ಸಿಬಿ ಎದುರಿಸಲಿದೆ. (ಏಜೆನ್ಸೀಸ್)
ನಟಿಸಿದ್ದು ಕೆಲವೇ ಸಿನಿಮಾಗಳು ಆದ್ರೆ ಮೃನಾಲ್ ಠಾಕೂರ್ ಒಟ್ಟು ಆಸ್ತಿ ಕೇಳಿದ್ರೆ ದಂಗಾಗ್ತೀರಾ!
ಊಟದ ವಿಚಾರದಲ್ಲಿ ನೀವು ಮಾಡುವ ಈ ಒಂದು ಸಣ್ಣ ತಪ್ಪು ಹೃದಯಾಘಾತಕ್ಕೆ ಕಾರಣವಾಗಬಹುದು!