ಬೆಂಗಳೂರು: ಮಾರ್ಚ್ 29ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್ 17ನೇ ಓವರ್ನಲ್ಲಿಯೇ ಗುರಿ ಮುಟ್ಟಿತು. ಈ ಮೂಲಕ ಆರ್ಸಿಬಿ ತವರಿನಲ್ಲಿ ಕೆಕೆಆರ್ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.
ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 83 ರನ್ ಕಲೆಹಾಕಿದರು. ಈ ಪಂದ್ಯದಲ್ಲಿ ಭರ್ಜರಿ 4 ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ ಸೋಲಿನ ನಡುವೆಯೂ ಆರ್ಸಿಬಿ ಪರ ದಾಖಲೆಯೊಂದನ್ನು ಬರೆದಿದ್ದಾರೆ.
ತವರು ಕ್ರೀಡಾಂಗಣ ಚಿನ್ನಸ್ವಾಮಿಯಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ಸವಾಲು ಸ್ವೀಕರಿಸಿದ ಆರ್ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 83 ರನ್ ಕಲೆಹಾಕಿದರು. ಈ ಪಂದ್ಯದಲ್ಲಿ ಭರ್ಜರಿ 4 ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಆರ್ಸಿಬಿ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಎಂಬ ದಾಖಲೆ ಕೂಡ ಬರೆದರು.
ಇದನ್ನೂ ಓದಿ: ರಾಜಸ್ಥಾನ ವಿರುದ್ಧ ಸೋತರೂ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಶೇಷ ದಾಖಲೆ ಬರೆದ ರಿಷಭ್ ಪಂತ್
ಈ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ ಐಪಿಎಲ್ನಲ್ಲಿ 241 ಸಿಕ್ಸರ್ಗಳನ್ನು ಪೂರೈಸಿದರು. ಈ ಮೂಲಕ ಆರ್ಸಿಬಿ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದರು. ಕ್ರಿಸ್ ಗೇಲ್ ಆರ್ಸಿಬಿ ಪರ 239 ಹಾಗೂ ಎಬಿ ಡಿವಿಲಿಯರ್ಸ್ 238 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಮೊದಲರೆಡು ಸ್ಥಾನಗಳಲ್ಲಿ ಇದ್ದರು.
ಇದಲ್ಲದೆ ಕೊಹ್ಲಿ ಐಪಿಎಲ್ನಲ್ಲಿ ಅಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ. ಧೋನಿ 252 ಐಪಿಎಲ್ ಪಂದ್ಯಗಳ 218 ಇನ್ನಿಂಗ್ಸ್ಗಳಲ್ಲಿ 239 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಆದರೆ ವಿರಾಟ್ ಇದುವರೆಗೆ ಐಪಿಎಲ್ನ 240 ಪಂದ್ಯಗಳ 232 ಇನ್ನಿಂಗ್ಸ್ಗಳಲ್ಲಿ 241 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ವಿರಾಟ್ ಲೀಗ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಅಧಿಕ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 357 ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.