ನವದೆಹಲಿ: ಪ್ರೇಮಿಗಳ ದಿನ ವ್ಯಾಲೆಂಟೈನ್ಸ್ ಡೇ ಹತ್ತಿರವಾಗುತ್ತಿದ್ದಂತೆ ಗೆಳೆಯ ಹಾಗೂ ಗೆಳತಿ ನಡುವಿನ ಸಂಬಂಧದ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆದರೆ, ಗೆಳತಿ ಮಾಡಿದ ಆ ಒಂದು ತಪ್ಪಿನಿಂದ ಪ್ರಿಯಕರ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಬ್ರಿಟನ್ ನಿವಾಸಿ ಜೇಕಬ್ ಸೈಮನ್ ಎಂಬಾತ ಹಲಚವು ವರ್ಷಗಳಿಂದ ಒಂದೇ ಸಂಖ್ಯೆಯ ಲಾಟರಿ ಟಿಕೆಟ್ಅನ್ನು ಖರೀದಿಸುತ್ತಿದ್ದ. ಪ್ರತಿಬಾರಿ ಒಂದೇ ಸಂಖ್ಯೆಯ ಟಿಕೆಟ್ ಖರೀದಿಸುತ್ತಿದ್ದ ಜೇಕಬ್ಗೆ ಫಲಿತಾಂಶ ಹೊರಬಿದ್ದಾಗ ತುಂಬಾ ಬೇಸರವಾಗುತ್ತಿತ್ತು. ಆದರೆ, ಈ ಬಾರಿ ಜೇಕಬ್ ಅಂದುಕೊಂಡ ಹಾಗೆ ಲಾಟರಿ ಫಲಿತಾಂಶ ಹೊರಬಂದಿದ್ದು, ಅವರ ಸಂಖ್ಯೆ ಅದೃಷ್ಟಶಾಲಿ ಎಂದು ಸಾಬೀತಾಯಿತು.
ಇದನ್ನೂ ಓದಿ: 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ; ದ್ವಿಚಕ್ರ ವಾಹನ ಸವಾರನಿಗೆ ಬಿತ್ತು ಬಾರಿ ದಂಡ
ಏಕೆಂದರೆ ಜೇಕಬ್ ನಂಬಿಕೆ ಇಟ್ಟು ಹಲವು ವರ್ಷಗಳಿಂದ ಖರೀದಿಸುತ್ತಿದ್ದ ಲಾಟರಿ ಟಿಕೆಟ್ಗೆ ಈ ಬಾರಿ 7.5 ಮಿಲಿಯನ್ ಪೌಂಡ್ ಅಂದರೆ ಸುಮಾರು 78 ಕೋಟಿ ಬಹುಮಾನ ಬಂದಿದೆ. ಈ ವಿಚಾರವನ್ನು ತನ್ನ ಪ್ರೇಯಸಿಗೆ ತಿಳಿಸಲೆಂದು ಕಾಲ್ ಮಾಡಿದಾಗ ಸಂತೋಷವೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿದ್ದು, ತಕ್ಷಣವೇ ಕುಸಿದು ಬಿದ್ದಿದ್ದಾನೆ.
ಪ್ರತಿ ಬಾರಿಯೂ ಒಂದೇ ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಜೇಕಬ್ ಕಂಡು ಬೇಸರಗೊಂಡಿದ್ದ ಪ್ರೇಯಸಿ. ಈ ಸಲ ನಂಬರ್ ಬದಲಾಯಿಸಲು ನಿರ್ಧರಿಸದ್ದಾಳೆ. ಅದರಂತೆ ಆತ ಈ ಸಲ ಖರೀದಿಸಿದ್ದ ಲಾಟರಿ ಟಿಕೆಟ್ ಬದಲಾಯಿಸಿದ್ದಾಳೆ. ಈ ವಿಚಾರ ತಿಳಿದು ಸ್ಥಳದಲ್ಲೇ ಜೇಕಬ್ ಕುಸಿದು ಬಿದ್ದಿದ್ದು, ತನ್ನ ಪ್ರೇಯಸಿ ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ 7.5 ಮಿಲಿಯನ್ ಪೌಂಡ್ ಅಂದರೆ ಸುಮಾರು 78 ಕೋಟಿ ರೂ. ಸ್ವಲ್ಪದಲ್ಲೇ ಕೈತಪ್ಪಿದೆ. ಈ ವಿಚಾರ ಸಾಮಾಜಿಕ ಜಾಲಾತಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.