ತಮಿಳುನಾಡು: ‘ಪಾಂಡಿಯಾ ನಾಡು’ ಖ್ಯಾತಿಯ ನಟ ವಿಶಾಲ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಮಾರ್ಕ್ ಆಂಟೋನಿ’ ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಈ ಮಧ್ಯೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟ, ‘ಲಿಯೋ’ ಚಿತ್ರದಲ್ಲಿ ತನಗೊಂದು ಪಾತ್ರವಿತ್ತು. ಅದನ್ನು ಯಾಕೆ ಮಾಡಲಾಗಲಿಲ್ಲ ಎಂಬುದಕ್ಕೆ ಸೂಕ್ತ ಕಾರಣವೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: SuperWin ಜತೆ ಕೈಜೋಡಿಸಿದ ಎಬಿ ಡಿವಿಲಿಯರ್ಸ್, ಪೂಜಾ ಹೆಗ್ಡೆ: ಆನ್ಲೈನ್ ಗೇಮಿಂಗ್ ವೇದಿಕೆಗೆ ಸಿಕ್ತು ಬಲ
“ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ದಳಪತಿ ವಿಜಯ್ ಇಬ್ಬರು ನನ್ನ ಆತ್ಮೀಯರು. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಲಿಯೋ’ ಚಿತ್ರದಲ್ಲಿ ನಟಿಸಲು ನನಗೊಂದು ಅವಕಾಶ ಒದಗಿತ್ತು. ಆದ್ರೆ, ದುರದೃಷ್ಟವಶಾತ್ ನಾನು ‘ಮಾರ್ಕ್ ಆಂಟೋನಿ’ ಮತ್ತು ‘ತುಪ್ಪರಿವಾಲನ್ 2’ ಸಿನಿಮಾಗಳ ಕೆಲಸಗಳಿಂದ ಆ ಅವಕಾಶವನ್ನು ಕೈಬಿಡಬೇಕಾಯಿತು” ಎಂದು ಹೇಳಿದರು.
“ದಳಪತಿ ವಿಜಯ್ ನನ್ನ ನೆಚ್ಚಿನ ನಟ, ಅವರ ಸಿನಿಮಾವನ್ನು ನೀವು ನಿರ್ದೇಶನ ಮಾಡುತ್ತಿದ್ದೀರಿ, ನಿಜಕ್ಕೂ ನೀವು ಲಕ್ಕಿ” ಎಂದು ವಿಶಾಲ್ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಹೇಳಿದರು. ಸದ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿರುವ ‘ಮಾರ್ಕ್ ಆಂಟೋನಿ’, ಬಾಕ್ಸ್ ಆಫೀಸ್ನಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ತೆಲುಗಿನಲ್ಲಿ ರಿಲೀಸ್ ಆಗಲಿದೆ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’