ಕಾಂಬೋಡಿಯಾ: ಮನೆಯ ಛಾವಣಿ ಕುಸಿಯುವ ಕೆಲವೇ ಕ್ಷಣಗಳ ಮೊದಲು ತಾಯಿ ತನ್ನ ಮಗುವನ್ನು ರಕ್ಷಿಸಿರುವ ಘಟನೆ ಕಾಂಬೋಡಿಯಾದದ ನಾಮ್ ಪೆನ್ನಲ್ಲಿ ನಡೆದಿದೆ.
ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಿಪ್ ಸ್ರೇ ಎಂಬ ಮಹಿಳೆನ ಮನೆಯಲ್ಲಿಯೇ ಅಂಗಡಿಯನ್ನು ಇಟ್ಟುಕೊಂಡಿದ್ದಳು. ಅಂಗಡಿಯಲ್ಲಿ ಕೂತಿದ್ದ ವೇಳೆ ಒಂದು ಶಬ್ದವು ಕೇಳಿ ಬಂದಿದ್ದು, ಗಾಬರಿಗೊಂಡ ಮಹಿಳೆ ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು ತನ್ನಿಬ್ಬರ ಮಕ್ಕಳೊಂದಿಗೆ ಒಳಗೆ ಓಡಿ ಹೋಗಿದ್ದಾಳೆ.
The #ceiling of a residence in Phnom Penh, #Cambodia, #collapsed in the living room. Luckily, the #mother inside the house acted quickly, picking up one child with one hand and holding a school bicycle having another child with the other. All her children were saved in the end. pic.twitter.com/aK9wXVsTvW
— Warm Talking (@Warm_Talking) July 18, 2023
ನಂತರ ಪ್ರಾಂಗಣದಲ್ಲಿದ್ದ ಮತ್ತೊಂದು ಮಗುವಿನ ನೆನಪಾಗಿದ್ದು, ಕೂಡಲೇ ತನ್ನ ಪ್ರಾಣವನ್ನು ಲೆಕ್ಕಿಸದೇ ಬೇಬಿ ವಾಕರ್ನಲ್ಲಿದ್ದ 9 ತಿಂಗಳ ಮಗುವಿನ ರಕ್ಷಣೆ ಮಾಡಿದ್ದಾಳೆ. ಇದಾದ ಕೆಲವೇ ಸೆಕೆಂಡುಗಳ ನಂತರ, ಪ್ರಾಂಗಣದಲ್ಲಿ ಮನೆಯ ಛಾವಣಿ ಕಳಚಿ ಬಿದ್ದಿದೆ. ಮನೆಯನ್ನು ಕಟ್ಟುವ ವೇಳೆ ವಾಟರ್ ಪ್ರೂಫಿಂಗ್ ವ್ಯವಸ್ಥೆ ಇರಲಿಲ್ಲ. ಮಳೆಯಿಂದಾಗಿ ಸೀಲಿಂಗ್ ದುರ್ಬಲವಾಗಿದ್ದು, ಕಳಚಿ ಬಿದ್ದಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್)