ನವದೆಹಲಿ: ಪ್ರಾಣಿಗಳು ಎಷ್ಟು ಶಾಂತ ಸ್ವಭಾವದಿಂದ ಇರುತ್ತಾವೋ ಅದೇ ರೀತಿ ಆಕ್ರಮಣಕಾರಿಯಾಗಿಯೂ ಸಹ ಇರುತ್ತವೆ. ಕೆಲವೊಮ್ಮೆ ನಾವು ಊಹಿಸಲು ಆಗದೇ ಇರುವುದು ಸಹ ನಡೆದೆ ಹೋಗುತ್ತವೆ.
ಈ ವಿಚಾರದ ಬಗ್ಗೆ ಯಾಕೆ ಮಾತನಾಡುತ್ತಿದ್ದಿವಿ ಎಂದುಕೊಳ್ಳಬಹುದು ಏಕೆಂದರೆ ಇಲ್ಲಿ ಶಾಂತ ಸ್ವಭಾವದ ಪ್ರಾಣಿಯೊಂದು ಆಕ್ರಮಣಕಾರಿಯಾಗಿ ನಡೆದುಕೊಳ್ಳುವ ಮೂಲಕ ಸುದ್ದಿಯಲ್ಲಿದೆ.
ತಾಳ್ಮೆ ಕಳೆದುಕೊಂಡ ಆಮೆ
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಮೆಗೆ ನೀರುಣಿಸುತ್ತಿರುವುದನ್ನು ನೋಡಬಹುದು.
ಇದರಲ್ಲಿ ಅವನಿಗೆ ತುಂಬಾ ಬಾಯಾರಿಕೆ ಆದಂತೆ ಕಾಣುತ್ತಿದೆ ಎಂದು ಮಹಿಳೆ ಹೇಳುತ್ತಿರುವುದನ್ನು ಕೇಳಬಹುದು. ಆದರೆ, ಇದ್ದಕ್ಕಿದ್ದಂತೆ ಆಮೆ ತಾಳ್ಮೆ ಕಳೆದುಕೊಂಡು ಮಹಿಳೆಯ ಮೇಲೆ ದಾಳಿ ಮಾಡಲು ಮುಂದಾಗುವುದನ್ನು ಕಾಣಬಹುದು.
ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದರಾಮಯ್ಯ ಕರೆ; ಫಲಿತಾಂಶದ ಮುನ್ನಾ ದಿನವೇ ಮಹತ್ವದ ಬೆಳವಣಿಗೆ
ಮಿಲಿಯನ್ಗಟ್ಟಲ್ಲೇ ವೀಕ್ಷಣೆ
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಯರಲ್ ಆಗಿದ್ದು ಮಹಿಳೆ ಮೇಲೆ ದಾಳಿ ಮಾಡಲೆತ್ನಿಸಿದ ಆಮೆಯ ವಿಡಿಯೋ ಮಿಲಿಯನ್ಗಟ್ಟಲ್ಲೇ ವೀಕ್ಷಣೆ ಹಾಗೂ ಲಕ್ಷಗಟ್ಟಲ್ಲೇ ಲೈಕ್ ಹಾಗೂ ಶೇರ್ ಪಡೆದಿದೆ.
ಸದ್ಯ ಈ ವಿಡಿಯೊ ನೋಡುತ್ತಿರುವ ನೆಟ್ಟಿಗರು ಭಿನ್ನ ವಿಭಿನ್ನ ಕಮೆಂಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.