ನವದೆಹಲಿ: ಪ್ರಪೋಸ್ ಮಾಡುವುದು ರೊಮ್ಯಾಂಟಿಕ್ ಆಗಿರಬೇಕು ಎಂದು ಅದಕ್ಕಾಗಿ ಬೋಟ್ನ ತುದಿಯಲ್ಲಿ ಸನ್ಸೆಟ್ನ ಬ್ಯಾಕ್ಗ್ರೌಂಡ್ನಲ್ಲಿ ಗೆಳತಿಗೆ ಮುಂದೆ ಪ್ರೇಮನಿವೇದನೆ ಮಾಡಬೇಕು ಎಂದು ಎಲ್ಲವನ್ನೂ ಸೆಟ್ ಮಾಡಿದ್ದ ಪ್ರಿಯಕರ, ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಉಂಗುರವಿದ್ದ ಬಾಕ್ಸ್ ನೀರಿಗೆ ಬಿದ್ದಿದೆ.
ಯುಎಸ್ನ ಫ್ಲೋರಿಡದಲ್ಲಿ ಸ್ಕಾಟ್ ಕ್ಲೈನ್ ಎಂಬಾತ ತನ್ನ ಗೆಳತಿ ಸುಜೀ ಟಕರ್ಗೆ ಪ್ರೇಮನಿವೇದನೆ ಮಾಡಲು ಮುಂದಾಗಿದ್ದಾಗ ಇಂಥದ್ದೊಂದು ಪ್ರಸಂಗ ನಡೆದಿದೆ. ಪ್ರಪೋಸ್ ಮಾಡುವ ಸಂದರ್ಭ ಅತ್ಯಂತ ರೊಮ್ಯಾಂಟಿಕ್ ಆಗಿರಬೇಕು ಎಂದು ಆತ ಸೂರ್ಯಾಸ್ತದ ದೃಶ್ಯದ ಹಿನ್ನೆಲೆಯಲ್ಲಿ ಪ್ರೇಮನಿವೇದನೆಯನ್ನು ಪ್ಲ್ಯಾನ್ ಮಾಡಿದ್ದ.
ಅವಳ ಮುಂದೆ ಮಂಡಿಯೂರಿ ಇನ್ನೇನು ಬಾಕ್ಸ್ನಿಂದ ರಿಂಗ್ ತೆಗೆದು ಅವಳಿಗೆ ತೊಡಿಸಬೇಕು ಎನ್ನುವಷ್ಟರಲ್ಲಿ ಬಾಕ್ಸ್ ಕೈ ತಪ್ಪಿ ನೀರಿಗೆ ಬಿದ್ದಿದೆ. ಆಗ ತಕ್ಷಣ ನೀರಿಗೆ ಧುಮುಕಿದ ಸ್ಕಾಟ್, ನೀರಲ್ಲಿ ಜಾಲಾಡಿ ಆ ಬಾಕ್ಸ್ ಪುನಃ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಗಮನ ಸೆಳೆದಿದೆ. ರಿಂಗ್ ಮತ್ತೆ ಸಿಕ್ಕ ಖುಷಿಯಲ್ಲಿ ‘ದಿಸ್ ಈಸ್ 100% ರಿಯಲ್, 100% ಮೈ ಲಕ್, 100% ವಿಲ್ ನೆವರ್ ಫೊರ್ಗೆಟ್’ ಎಂದು ಫೇಸ್ಬುಕ್ನಲ್ಲಿ ಸ್ಕಾಟ್ ಹಂಚಿಕೊಂಡಿದ್ದಾನೆ.
ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?
ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…