More

    ದೋಣಿ ತುಂಬಿಸುವ ಕಾರ್ಯ ಸಂಪನ್ನ

    ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಊರಿನ ತಂಬ್ರಹಳ್ಳಿ ರಸ್ತೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಶಿಬಾರದಲ್ಲಿ ಗೊರವಪ್ಪನವರಿಂದ ದೋಣಿ ತುಂಬಿಸುವ ಸಾಂಪ್ರದಾಯಿಕ ಕಾರ್ಯ ಮತ್ತು ಶಸ್ತ್ರಧಾರಣೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

    ಪ್ರತಿವರ್ಷದಂತೆ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದ ಬಳಿಕ, ಪಟ್ಟಣದ ಶಿಬಾರದಲ್ಲಿ ವಿಶೇಷ ಪೂಜೆಯೊಂದಿಗೆ ಹೆಗ್ಗಪ್ಪನನ್ನು ಕರೆ ತರುವ ಕಾರ್ಯ ನಡೆಯಿತು. ಶ್ರೀಸ್ವಾಮಿಯ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

    ಮೆರವಣಿಗೆಯುದ್ದಕ್ಕೂ ಜಯಘೋಷಗಳನ್ನು ಕೂಗುತ್ತಾ ಸಿಡಿಮದ್ದುಗಳನ್ನು ಸಿಡಿಸಿ ಗೊರವಯ್ಯನವರಿಂದ ದೋಣಿ ತುಂಬಿಸುವುದು ಮತ್ತು 16.4 ಅಡಿ ಉದ್ದದ ಹಿತ್ತಾಳೆ ಸರಳಿನ ಪವಾಡ ಅಚ್ಚುಕಟ್ಟಾದ ಪೂಜೆ ನೆರವೇರಿಸಲಾಯಿತು. ಗೊರವಪ್ಪನವರು ಸಾಂಪ್ರದಾಯಿಕ ಉಡುಗೆಯಲ್ಲಿ ಡಮರುಗ ವಾದನದಿಂದ ಪ್ರದಕ್ಷಿಣೆ ಹಾಕಿದರು.

    ಇದನ್ನು ಓದಿ:“ಸಂಪಾಯಿತಲೇ ಪರಾಕ್” ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯ ಅರ್ಥ ಏನು?


    ಪೂಜೆಯ ಬಳಿಕ ಸ್ವಾಮಿಯ ಪಟಾಕ್ಷಿಯನ್ನು ಕೂಗಲಾಯಿತು. ಕಳೆದ ವರ್ಷ ಪಡೆದಿದ್ದ ಬಣಕಾರ ನಿಂಗಪ್ಪ ದೇಗುಲಕ್ಕೆ ಒಪ್ಪಿಸಿದರು. ಈ ಬಾರಿ ಪಟಾಕ್ಷಿಯನ್ನು ಹೆಗ್ಗಪ್ಪನವರ ಕೋಟೆಪ್ಪ 10,501 ರೂ.ಗಳಿಗೆ ಪಡೆದರು.

    ಪ್ರಮುಖರಾದ ಎಚ್.ಎಂ.ವಿಜಯ, ಪೋಟೋ ರಾಮಣ್ಣ, ಐನಳ್ಳಿ ಸೋಮಶೇಖರ, ಸಾಲ್ಮನಿ ನಾಗರಾಜ, ಚಿತ್ತವಾಡ್ಗಿ ಕಲ್ಲೇಶಪ್ಪ, ರುದ್ರೇಶ, ಸಿ.ಶಿವರಾಜ, ಚಿತ್ತವಾಡ್ಗಿ ಗಿರಿಜಮ್ಮ, ಶೋಭಾ ಪ್ರಕಾಶ, ನಾಗಮ್ಮ, ಸಕ್ರಿಹಳ್ಳಿ ಹಾಲೇಶ, ಸೋಡ ನಿಂಬಣ್ಣ, ಮೆಟ್ರಿ ಗೋಣೆಪ್ಪ, ಸುದೀಪ್, ಅಕ್ಕಮ್ಮ, ಕ್ಯಾಂಟಿನ್ ವೆಂಕಟೇಶ, ಸಕ್ರಿಹಳ್ಳಿ ಪವನ್ ಕುಮಾರ್, ನೀಲಕಂಠ, ಇಟ್ಟಂಗಿ ದೇವರಾಜ, ಮಡಿವಾಳರ ಜಗದೀಶ, ಮೆಟ್ರಿ ದಯಾನಂದ, ಬಣಕಾರ ನಿಂಗಪ್ಪ, ಗೊರವಪ್ಪ ಹೊಳೆಯಪ್ಪ, ಸೊನ್ನದ ಗೊರವಯ್ಯ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts