More

    ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…

    ನವದೆಹಲಿ: ಕೆಲವರು ತೂಕ ಕಳೆದುಕೊಳ್ಳಲಿಕ್ಕೆ ಫಿಟ್​ನೆಸ್​​, ಅಂಗಸೌಷ್ಠವ ಮುಂತಾದ ಕಾರಣಗಳಿರುತ್ತವೆ. ಅದಕ್ಕಾಗಿ ಅವರು ಕಸರತ್ತು ನಡೆಸಿ ತೂಕವನ್ನು ಇಳಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಪುತ್ರನಿಗಾಗಿ ಬರೋಬ್ಬರಿ ಹತ್ತು ಕೆ.ಜಿ. ತೂಕ ಕಳೆದುಕೊಂಡಿದ್ದಾನೆ. ಅದೂ ಬರೀ ಎರಡೇ ತಿಂಗಳಲ್ಲಿ.

    ಮುಂಬೈನ ವಿಖ್ರೋಲಿಯಲ್ಲಿನ ಮಧ್ಯಮವರ್ಗದ ಕುಟುಂಬದ ವ್ಯಕ್ತಿ ಯೋಗೇಶ್​ ಎಂಬಾತ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ತನ್ನ ಮಗನ ಯಕೃತ್ತು ಕಸಿಗಾಗಿ ಈ ತೂಕವನ್ನು ಕಳೆದುಕೊಂಡಿದ್ದಾನೆ. ಈತನ ಪುತ್ರ ನಿಭಿಷ್ ಪ್ರೊಗ್ರೆಸಿವ್ ಫೆಮಿಲಿಯಲ್ ಇಂಟ್ರಾಹೆಪ್ಟಿಕ್ ಕೊಲೆಸ್ಟಾಸಿಸ್ (ಪಿಎಫ್ಐಸಿ-2) ಎಂಬ ಕಾಯಿಲೆ ಜತೆಗೆ ಕಾಮಾಲೆಗೂ ಒಳಗಾಗಿದ್ದ. ಇದರಿಂದ ಎರಡು ವರ್ಷದ ಈತನ ಪಿತ್ತಜನಕಾಂಗ ಹಾನಿಗೀಡಾಗಿದ್ದು, ಯಕೃತ್ತು ಕಸಿ ಮಾಡಬೇಕಾದ್ದು ಅನಿವಾರ್ಯವಾಗಿತ್ತು.

    ಪುತ್ರನಿಗೆ ದಾನವಾಗಿ ನೀಡಲು ತಂದೆಯ ಯಕೃತ್ತು ಹೊಂದಾಣಿಕೆ ಆಗುತ್ತಿದ್ದರೂ ಆತ ಸ್ಥೂಲಕಾಯ ಹೊಂದಿದ್ದರಿಂದ ಅದು ಸಾಧ್ಯವಿರಲಿಲ್ಲ. ಹೀಗಾಗಿ ಅತಿಬೇಗ ತೂಕ ಕಳೆದುಕೊಳ್ಳಲು ನಿರ್ಧರಿಸಿದ ತಂದೆ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ಇಳಿಸಿಕೊಂಡಿದ್ದಾನೆ. ಅಂದರೆ ಈ ವ್ಯಕ್ತಿ ತನ್ನ ದೇಹತೂಕ 86 ಕೆ.ಜಿ. ಇದ್ದಿದ್ದನ್ನು 76 ಕೆ.ಜಿ.ಗೆ ಇಳಿಸಿಕೊಂಡಿದ್ದಾನೆ. ಆ ಬಳಿಕ ತಂದೆಯ ಯಕೃತ್ತನ್ನು ಪುತ್ರನಿಗೆ ಕಸಿ ಮಾಡಲಾಗಿದೆ.

    ಎರಡೂವರೆ ವರ್ಷದ ಮಗಳಿಗೆ ತಿನ್ನಲೂ ಕೊಡಿಸಲಾಗದೆ ಕೊಂದ ಟೆಕ್ಕಿ!; ಕೆಲಸವೂ ಇರಲಿಲ್ಲ, ಆರ್ಥಿಕ ನಷ್ಟ ಜತೆಗೆ ರಾಬರಿ ಕೇಸ್​..

    ಗಣಿತದ ಟೇಬಲ್​ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!

    ದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts