ಗಣಿತದ ಟೇಬಲ್​ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!

ನವದೆಹಲಿ: ಮಕ್ಕಳು ಕಂಠಪಾಠ ಹೇಳದಿದ್ದರೆ, ಹೋಮ್​ವರ್ಕ್​ ಮಾಡಿಕೊಂಡು ಬರದಿದ್ದರೆ ಶಿಕ್ಷಕರು ಶಿಕ್ಷೆ ಕೊಡುವುದು ಹೊಸದೇನಲ್ಲ. ಅದರಲ್ಲೂ ಕೆಲವು ಕ್ರೂರವಾಗಿ ನಡೆದುಕೊಂಡು ಟೀಕೆಗೆ-ಆಕ್ರೋಶಕ್ಕೆ ಒಳಗಾದ ಪ್ರಕರಣಗಳೂ ಇವೆ. ಅಂಥದ್ದೇ ಇನ್ನೊಂದು ಪ್ರಕರಣ ಕಂಡುಬಂದಿದೆ. ಇಲ್ಲಿ 9 ವರ್ಷದ ಬಾಲಕನೊಬ್ಬ ಗಣಿತದ ಸೂತ್ರವನ್ನು ಹೇಳಿಲ್ಲ ಎಂದು ಟೀಚರ್​ ಆತನ ಕೈಗೆ ಡ್ರಿಲ್ಲಿಂಗ್ ಮಷಿನ್​ ಇಟ್ಟು ದೌರ್ಜನ್ಯ ನಡೆಸಿದ ಘಟನೆಯೊಂದು ನಡೆದಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗೆ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಕಾನ್ಪುರದ ಪ್ರೇಮ್​ನಗರದಲ್ಲಿ … Continue reading ಗಣಿತದ ಟೇಬಲ್​ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!