More

    ಎರಡೂವರೆ ವರ್ಷದ ಮಗಳಿಗೆ ತಿನ್ನಲೂ ಕೊಡಿಸಲಾಗದೆ ಕೊಂದ ಟೆಕ್ಕಿ!; ಕೆಲಸವೂ ಇರಲಿಲ್ಲ, ಆರ್ಥಿಕ ನಷ್ಟ ಜತೆಗೆ ರಾಬರಿ ಕೇಸ್​..

    ಬೆಂಗಳೂರು: ಎರಡೂವರೆ ವರ್ಷದ ಮಗಳಿಗೆ ತಿನ್ನಲೂ ಕೊಡಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಸಾಫ್ಟ್​ವೇರ್ ಉದ್ಯೋಗಿಯೊಬ್ಬ ಆಕೆಯನ್ನು ಕೈಯಾರೆ ಕೊಂದು ಹಾಕಿದ ಪ್ರಕರಣವೊಂದು ನಡೆದಿದೆ. ಪೊಲೀಸರು ಆರೋಪಿ ಟೆಕ್ಕಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.

    ರಾಹುಲ್ ಪರಾಮರ್​ (45) ಆರೋಪಿ ಟೆಕ್ಕಿ, ಈತ ತನ್ನ ಎರಡೂವರೆ ವರ್ಷದ ಪುತ್ರಿ ಜಿಯಾಳನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾನೆ. ಮಗಳನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿದ್ದ ಟೆಕ್ಕಿ, ಅವಳಿಗೆ ಬಿಸ್ಕಿಟ್​ ಮತ್ತು ಚಾಕೋಲೇಟ್​ ಕೊಡಿಸಿದ್ದ. ಮಾತ್ರವಲ್ಲ ಅವಳೊಂದಿಗೆ ಹಿಂದಿನ ಸೀಟ್​ನಲ್ಲಿ ಕುಳಿತು ಆಟ ಕೂಡ ಆಡಿದ್ದ. ಆದರೆ ಆರ್ಥಿಕ ಸಂಕಷ್ಟ ನೆನೆದು, ಮನೆಗೆ ಹೋದರೆ ಎದುರಿಸಬೇಕಾದ ಭಯಂಕರ ಪರಿಸ್ಥಿತಿಗೆ ಬೆದರಿ ಮಗಳನ್ನೇ ಸಾಯಿಸಿದ್ದಾಗಿ ಹೇಳಿಕೊಂಡಿದ್ದಾನೆ.

    ಮಗಳನ್ನು ಸಾಯಿಸಿದ ಬಳಿಕ ಆಕೆಯನ್ನು ಬೆಂಗಳೂರು-ಕೋಲಾರ ಹೆದ್ದಾರಿ ಮಧ್ಯದ ಕೆಂಡತ್ತಿ ಎಂಬಲ್ಲಿ ಕೆರೆಗೆ ಎಸೆದಿದ್ದ. ಶುಕ್ರವಾರ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಮಗಳನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪವಿದೆ, ಆದರೆ ನನಗೆ ಹಾಗೆ ಮಾಡದೆ ಬೇರೆ ವಿಧಿ ಇರಲಿಲ್ಲ ಎಂಬುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ರಾಹುಲ್ ಹಾಗೂ ಜಿಯಾ ನ. 15ರಿಂದ ಕಾಣೆಯಾಗಿದ್ದರು. ಮಗಳನ್ನು ಶಾಲೆಗೆ ಕರೆದೊಯ್ಯುವುದಾಗಿ ಹೇಳಿದ್ದ ಪತಿ ಹಾಗೂ ಮಗಳು ಇಬ್ಬರೂ ಮರಳದ್ದರಿಂದ ಪತ್ನಿ ಭವ್ಯಾ ನಾಪತ್ತೆ ದೂರು ನೀಡಿದ್ದರು. ಅದಾದ ಬಳಿಕ ಜಿಯಾ ಶವ ಪತ್ತೆಯಾಗಿದ್ದು, ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು.

    ರಾಹುಲ್ ಕೆಲಸ ಕಳೆದುಕೊಂಡಿದ್ದಲ್ಲದೆ, ಬಿಟ್ ​ಕಾಯಿನ್ ಬಿಸಿನೆಸ್​​ನಲ್ಲಿ ನಷ್ಟಕ್ಕೂ ಒಳಗಾಗಿದ್ದ. ಅಲ್ಲದೆ ಪೊಲೀಸರಿಂದ ರಾಬರಿ ಕೇಸ್​ ಸಂಬಂಧ ವಿಚಾರಣೆಯನ್ನೂ ಎದುರಿಸುತ್ತಿದ್ದ. ಹೆಂಡತಿಯ ಆಭರಣ ಅಡವಿಟ್ಟು, ಚಿನ್ನವನ್ನು ಯಾರೋ ದರೋಡೆ ಮಾಡಿಕೊಂಡು ಹೋಗಿದ್ದರು ಎಂದು ಸುಳ್ಳು ಹೇಳಿದ್ದ. ಮಗಳನ್ನು ತುಂಬಾ ಹಚ್ಚಿಕೊಂಡಿದ್ದ ರಾಹುಲ್ ಇದೇ ಕಾರಣಕ್ಕೆ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿ ಸಾಯಲು ನಿರ್ಧರಿಸಿದ್ದ.

    ಮನೆ ಬಿಟ್ಟ ಮೇಲೆ ಆಕೆಯನ್ನು ಕೊಂದು ನಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಅದಾಗ್ಯೂ ಹಲವು ಸಲ ಮನೆಗೆ ವಾಪಸ್​ ಹೋಗಬೇಕು ಅಂತ ಅನಿಸಿದರೂ ಸಾಲದ ಹೊರೆಯ ಭಯಕ್ಕೆ ಈ ಕೃತ್ಯವೆಸಗಿದೆ ಎಂಬುದಾಗಿ ರಾಹುಲ್ ಹೇಳಿಕೊಂಡಿದ್ದಾನೆ. ಮಗಳು ಅಳುತ್ತಿದ್ದಳು, ಆದರೆ ಅವಳಿಗೆ ಬೇಕಾದ್ದು ಕೊಡಿಸಲು ನನ್ನಲ್ಲಿ ಹಣ ಉಳಿದಿರಲಿಲ್ಲ. ಮನೆಗೆ ಬಂದರೆ ಎದುರಿಸಬೇಕಾದ ಪರಿಸ್ಥಿತಿ ನೆನೆದು ವಾಪಸ್ ಹೋಗಲಿಕ್ಕೂ ಹೆದರಿದೆ. ಅವಳಿಗೆ ತಿನ್ನಲು ಏನೂ ಕೊಡಿಸಲಾಗದ ಅಸಹಾಯಕತೆಯಿಂದ ಸಾಯಿಸಬೇಕಾಯಿತು. ಅವಳು ಅಳುತ್ತಿದ್ದಳು, ನಾನು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಕೊಂದೆ ಎಂಬುದಾಗಿ ರಾಹುಲ್ ವಿಚಾರಣೆಯಲ್ಲಿ ಹೇಳಿದ್ದಾನೆ.

    ಗಣಿತದ ಟೇಬಲ್​ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts