More

    ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ

    ಬ್ಯಾಡಗಿ: ಬಡ ಜನತೆಗೆ ದುಂದು ವೆಚ್ಚ ತಗ್ಗಿಸುವ ಮೂಲಕ ಆರ್ಥಿಕ ತೊಂದರೆ ತಪ್ಪಿಸುವಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಮಲ್ಲಪ್ಪ ಹುಚ್ಚಗೊಂಡರ ತಿಳಿಸಿದರು.

    ಪಟ್ಟಣದಲ್ಲಿ ಸೋಮವಾರ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 69ನೇ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಶ್ರೀಮಂತರಿಗೆ ಸಾಕಷ್ಟು ವೆಚ್ಚದಲ್ಲಿ ವಿವಾಹ ಮಾಡಿಕೊಳ್ಳುವ ಸಾಮರ್ಥ್ಯದ್ದು, ಬಡವರು ಇಂತಹ ಕಾರ್ಯಕ್ರಮಗಳ ಸಲುವಾಗಿ ಲಕ್ಷಾಂತರ ರೂ. ಸಾಲ ಮಾಡಿ ಸಮಸ್ಯೆಯಲ್ಲಿ ಸಿಲುಕುತ್ತಾರೆ ಎಂದರು.

    ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹ ಅನುಕೂಲವಾಗಿದ್ದು, ವಧು-ವರರಿಗೆ ಸಮಿತಿ ವತಿಯಿಂದ ತಾಳಿ, ಬಟ್ಟೆ, ಕಾಲುಂಗರ, ಬಾಸಿಂಗ ಇತ್ಯಾದಿಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಆರೇಳು ದಶಕಗಳಿಂದ ಮುಂದುವರಿದಿದೆ. ಇಂತಹ ದೊಡ್ಡಮಟ್ಟದ ಕಾರ್ಯಕ್ರಮಕ್ಕೆ ಸ್ಥಳೀಯ ವರ್ತಕರು ಹಾಗೂ ಇನ್ನುಳಿದ ದಾನಿಗಳ ಸಹಕಾರವಿದೆ. ದೇವಸ್ಥಾನ ಸಮಿತಿ ವತಿಯಿಂದ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದು, ಇಲ್ಲಿಯೂ ಬಡಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಉತ್ತಮ ಕಾರ್ಯಕ್ರಮಗಳನ್ನು ಟ್ರಸ್ಟ್ ಆಯೋಜಿಸುತ್ತಿದೆ ಎಂದರು.

    ಪೌರೋಹಿತ್ಯ ವಹಿಸಿದ್ದ ಸಿಂಧಗಿ ಮಠದ ವೇ.ರಾಚಯ್ಯನವರು ಓದಿಸೋಮಠ ಮಾತನಾಡಿ, ವಧು-ವರರು ಇಂದಿನಿಂದ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಜೀವನದ ಸಿದ್ಧಾಂತಗಳಿಗೆ ಬೆಲೆ ಕೊಡಬೇಕು. ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಾದರಿ ಜೀವನ ಸಾಗಿಸಬೇಕು ಎಂದರು.

    ಬೆಳಗ್ಗೆ 5 ಗಂಟೆಯಿಂದ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ, 8 ಗಂಟೆಗೆ ಗುಗ್ಗಳ ಜರುಗಿತು. ಚನ್ನಬಸಯ್ಯ ಹಿರೇಮಠ ಹಾಗೂ ಸಿಂಧಗಿಮಠದ ಜಂಗಮ ವಟುಗಳು 4 ಜೊತೆ ನೂತನ ವಧುವರರಿಗೆ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.

    ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರಯ್ಯ ಆಲದಗೇರಿ, ಮಾಲತೇಶ ಅರಳೀಮಟ್ಟಿ, ಶಂಭುಲಿಂಗಪ್ಪ ಅಂಗಡಿ, ಗಂಗಾಧರ ತಿಳವಳ್ಳಿ, ಶಿವಪ್ಪ ಬಣಕಾರ, ನಾಗಯ್ಯ ಕಲ್ಮಠ, ಶಿವಯೋಗೆಪ್ಪ ಶೆಟ್ಟರ, ಮಹಾಲಿಂಗಪ್ಪ ಶಿರೂರು, ಉಮೇಶ ಸಂಕಣ್ಣನವರ, ಬಸವರಾಜ ಕಡೇಕೊಪ್ಪ, ಭದ್ರಗೌಡ್ರ ಮಲ್ಲನಗೌಡ್ರ, ಪ್ರಶಾಂತ ಯಾದವಾಡ, ಮೃತ್ಯುಂಜಯ್ಯ ಹಿರೇಮಠ, ಬಸವರಾಜ ಛತ್ರದ, ಶಿವಯೋಗಿ ಶಿರೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts