More

    ಗಬ್ಬುನಾರುತ್ತಿರುವ 20 ಟನ್ ಕಸದಲ್ಲಿ 2 ಗಂಟೆಗಳ ಕಾಲ ಹುಡುಕಾಟ; ಯಾಕೆ ಗೊತ್ತಾ?

    ಅಮೆರಿಕಾ: ನೈರ್ಮಲ್ಯ ಕಾರ್ಯಕರ್ತರು 2 ಗಂಟೆಗಳ ಕಾಲ 20 ಟನ್ ಕಸದಲ್ಲಿ ಹುಡುಕಲು ಪ್ರಾರಂಭಿಸಿದರು. ಅವರು ಗಬ್ಬುನಾರುತ್ತಿರುವ ಕಸದಲ್ಲಿ ಏನನ್ನು ಹುಡುಕುತ್ತಿರು ಎನ್ನುವ ಪ್ರಶ್ನೆ ಇದ್ದರೆ ಈ ಸ್ಟೋರಿ ಓದಿ…

    ಅಮೆರಿಕನ್ ಮಹಿಳೆಯೊಬ್ಬಳು ಆಕಸ್ಮಿಕವಾಗಿ ತನ್ನ ಮದುವೆಯ ಉಂಗುರವನ್ನು ಕಸದ ಬುಟ್ಟಿಗೆ ಎಸೆದಿದ್ದಾಳೆ. ಆದರೆ ಇದು ಆಕೆಯ ಅರಿವಿಗೆ ಬಂದಿಲ್ಲ. ಆದರೆ ವಜ್ರದ ಉಂಗುರವು ಕೆಲವು ದಿನಗಳ ನಂತರ ಹುಡುಕಾಡಿದ್ದಾಳೆ. ನಂತರ ಆಕಗೆ ಕಸದ ಬುಟ್ಟಿಗೆ ಎಸೆದಿದ್ದು ನೆನಪಾಗಿದೆ.

    ವಿಂಡ್‌ಹ್ಯಾಮ್ ಜನರಲ್ ಸರ್ವಿಸಸ್ ಡೈರೆಕ್ಟರ್ ಡೆನ್ನಿಸ್ ಸೆನಿಬಾಲ್ಡಿಗೆ ಕರೆ ಮಾಡಿ ತಿಳಿಸಿದಳು. ಅದನ್ನು ಹುಡುಕಲು ಸಹಾಯ ಕೇಳಿದಳು. ಯಾವ ಸಮಯಕ್ಕೆ ಗಂಡ ಕಸ ಎಸೆದಿದ್ದಾನೆ ಯಾವ ಏರಿಯಾ? ಬ್ಯಾಗ್ ವಿವರ ನೀಡಿದ್ದಾಳೆ. ನೈರ್ಮಲ್ಯ ಕಾರ್ಮಿಕರು ಸುಮಾರು 20 ಟನ್ ಕಸದಲ್ಲಿ ಹುಡುಕಲು ಪ್ರಾರಂಭಿಸಿದರು.

    ನೈರ್ಮಲ್ಯ ಕಾರ್ಯಕರ್ತರು 20 ಟನ್‌ಗಳಷ್ಟು ಕಸವನ್ನು ಶೋಧಿಸಿದ್ದಾರೆ. 12 ಅಡಿ ಕಸದ ಚೀಲಗಳನ್ನು ತೆರೆದಾಗ ಮಹಿಳೆ ಕಳೆದುಹೋದ ವಜ್ರದ ಉಂಗುರ ಸ್ವಚ್ಛತಾ ಸಿಬ್ಬಂದಿಗೆ ಸಿಕ್ಕಿದೆ. ಕೂಡಲೇ ಮಹಿಳೆಯನ್ನು ಕರೆಸಿ ಉಂಗುರವನ್ನು ಹಿಂತಿರುಗಿಸಿದ್ದಾರೆ. ಮಹಿಳೆ ತನ್ನ ಉಂಗುರವನ್ನು ಕಂಡು ಸಂತೋಷಪಟ್ಟಿದ್ದಾಳೆ.

    ಇಂತಹ ಚಿನ್ನಾಭರಣ ಕಳೆದು ಜನರು ಕರೆ ಮಾಡುವ ಘಟನೆಗಳು ಹೊಸದಲ್ಲ. ಚಿನ್ನ, ಹಣ, ಬೆಲೆ ಬಾಳುವ ಸೆಲ್ ಫೋನ್ ಗಳು ಕಳೆದು ಹೋದರೆ ಅದನ್ನು ವಾಪಸ್ ಪಡೆಯುವುದು ಕಷ್ಟ. ಮಹಿಳೆಯ ಕಳೆದುಹೋದ ವಜ್ರದ ಉಂಗುರವನ್ನು ಆಕೆಗೆ ಹಿಂದಿರುಗಿಸುವಲ್ಲಿ ನ್ಯೂ ಹ್ಯಾಂಪ್‌ಶೈರ್ ನೈರ್ಮಲ್ಯ ಕಾರ್ಯಕರ್ತರ ಸಹಾಯವು ನಿಜವಾಗಿಯೂ ಪ್ರಶಂಸನೀಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts