ನಾಗಾರ್ಜುನ ಅಭಿನಯದ ‘ಘೋಸ್ಟ್’ ಚಿತ್ರದಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದೆ. ಈ ಚಿತ್ರಕ್ಕೆ ಅಮಲಾ ಪಾಲ್ ನಾಯಕಿಯಾಗಿ ಕೆಲವೇ ದಿನಗಳ ಹಿಂದಷ್ಟೇ ಸೇರಿಕೊಂಡಿದ್ದರು. ಈಗ ಅವರು ಹೊರನಡೆದಿದ್ದು, ಅವರ ಜಾಗಕ್ಕೆ ಸೋನಲ್ ಚೌಹಾನ್ ಬಂದಿದ್ದಾರೆ. ಈ ಸೋನಲ್ ಯಾರು ಗೊತ್ತಾಗಲಿಲ್ವಾ? ಕನ್ನಡದ ‘ಚೆಲುವೆಯೇ ನಿನ್ನೇ ನೋಡಲು’ ನೆನಪಿಸಿಕೊಳ್ಳಿ.
ಈ ಚಿತ್ರದಲ್ಲಿ ಶಿವರಾಜಕುಮಾರ್ಗೆ ನಾಯಕಿಯಾಗಿದ್ದರು ಸೋನಲ್. ಈಗ ತೆಲುಗಿನಲ್ಲಿ ನಾಗಾರ್ಜುನಗೆ ನಾಯಕಿಯಾಗುತ್ತಿದ್ದಾರೆ. ‘ಘೋಸ್ಟ್’ ಚಿತ್ರದ ನಾಯಕಿ ಬದಲಾಗುತ್ತಿರುವುದು ಇದು ಮೊದಲಲ್ಲ, ಎರಡನೆಯ ಬಾರಿಗೆ ಎಂಬುದು ಗೊತ್ತಿರಲಿ. ಮೊದಲಿಗೆ ಚಿತ್ರದ ನಾಯಕಿಯಾಗಿದ್ದವರು ಕಾಜಲ್ ಅಗರ್ವಾಲ್.
ಒಂದು ವಾರ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರಂತೆ ಕಾಜಲ್. ಅದೇನಾಯಿತೋ ಏನೋ, ಅವರು ಚಿತ್ರತಂಡದಿಂದ ಹೊರಬಂದರು. ಆ ನಂತರ ಚಿತ್ರತಂಡಕ್ಕೆ ಸೇರ್ಪಡೆಯಾದವರು ಅಮಲಾ ಪಾಲ್. ಒಂದಿಷ್ಟು ದಿನ ಚಿತ್ರೀಕರಣದಲ್ಲಿ ಭಾಗವಹಿಸಿ ಅವರು ಸಹ ಚಿತ್ರತಂಡದಿಂದ ಹೊರನಡೆದಿದ್ದು, ಅ ಜಾಗಕ್ಕೆ ಸೋನಲ್ ಬಂದಿದ್ದಾರೆ. –ಏಜೆನ್ಸೀಸ್
ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್ ಒಮಿಕ್ರಾನ್ನ ರೋಗಲಕ್ಷಣ!