ನವದೆಹಲಿ: ಈಗಾಗಲೇ ಟಿ-20 ಕ್ರಿಕೆಟ್ ತಂಡದ ನಾಯಕನಾಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಇದೀಗ ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದ್ದು, ಟ್ವಿಟ್ಟರ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮೂಲಕ ಏಕದಿನ ಹಾಗೂ ಟಿ-20 ತಂಡಕ್ಕೆ ಹಿಟ್ಮ್ಯಾನ್ ಅವರಿಗೆ ನಾಯಕನ ಸ್ಥಾನ ನೀಡಲಾಗಿದೆ. ಉಳಿದಂತೆ ಟೆಸ್ಟ್ ತಂಡದಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಈಗಾಗಲೇ ನಾಯಕರಾಗಿ ರೋಹಿತ್ 10 ಏಕದಿನ ಪಂದ್ಯಗಳನ್ನು ಆಡಿದ್ದು, 8ರ ಗೆಲುವು ಸಾಧಿಸಿದ್ದಾರೆ. 22 ಟಿ20 ಪಂದ್ಯಗಳನ್ನು ಆಡಿದ್ದು, 18ರಲ್ಲಿ ಗೆಲುವು ದಾಖಲಿಸಿದ್ದಾರೆ. ನಾಯಕರಾಗಿ ಈಗಾಗಲೇ ಯಶಸ್ಸು ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಮತ್ತಷ್ಟ ಸಾಧನೆಯ ಪಥದಲ್ಲಿ ಸಾಗುವ ಭರವಸೆಯನ್ನು ಹೊಂದಿದೆ.
ಇನ್ನು ರೋಹಿತ್ ಟೀಮ್ ಇಂಡಿಯಾ ನಾಯಕರಾದ ಮೇಲೆ ಅವರ ಸಂಬಳ ಎಷ್ಟಾಗಿರಬಹುದು ಎಂಬ ಕುತೂಹಲ ಮನೆ ಮಾಡಿದ್ದು, ಅದಕ್ಕೆ ಉತ್ತರ ಇಲ್ಲಿದೆ. ಸದ್ಯ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ರೋಹಿತ್ ನಾಯಕರಾಗಿದ್ದರೂ ಕೂಡ ಅವರ ಸಂಬಳದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. ರೋಹಿತ್ ಎ+ ಕೆಟಗರಿಯಲ್ಲಿರುವುದರಿಂದ ವಾರ್ಷಿಕ ಬಿಸಿಸಿಐನಿಂದ 7 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ. ರೋಹಿತ್ ಬಿಟ್ಟು ಜಸ್ಪ್ರಿತ್ ಬೂಮ್ರಾ ಮತ್ತು ವಿರಾಟ್ ಕೊಹ್ಲಿ ಎ+ ಕೆಟಗರಿಯಲ್ಲಿದ್ದಾರೆ. ಹೀಗಾಗಿ ರೋಹಿತ್ ಕಾಟ್ರ್ಯಾಕ್ಟ್ ಆಧಾರದ ಮೇಲೆ ಅದೇ ಸಂಬಳದಲ್ಲಿ ಮುಂದುವರಿಯಲಿದ್ದಾರೆ.
ನಾಯಕರಾಗಿ ಬದಲಾವಣೆ ಆಗಿದ್ದನ್ನು ಬಿಟ್ಟರೆ, ರೋಹಿತ್ ಅವರ ಸಂಬಳದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಏಕದಿನ ತಂಡದ ನಾಯಕತ್ವ ಬದಲಾವಣೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಬಿಸಿಸಿಐ ಮುಖ್ಯಸ್ಥ ಗಂಗೂಲಿ..!
T-20 ಜೊತೆ ಏಕದಿನ ತಂಡದ ಕ್ಯಾಪ್ಟನ್ ಆಗಿ ‘ಹಿಟ್ಮ್ಯಾನ್’ ಆಯ್ಕೆ: ಟೆಸ್ಟ್ ತಂಡಕ್ಕೆ ಸೀಮಿತವಾದ ಕೊಹ್ಲಿ ನಾಯಕತ್ವ…
2021ರಲ್ಲಿ ಹೆಚ್ಚು ಸರ್ಚ್ ಮಾಡಲಾದ ವಿಚಾರ, ವ್ಯಕ್ತಿಗಳು… ಶಾರುಖ್ ಪುತ್ರನಿಗೂ ಸ್ಥಾನ!