ಮುಂಬೈ: ಬಾಲಿವುಡ್ನಲ್ಲಿ ಮತ್ತೊಂದು ತಾರಾಜೋಡಿಯ ಅದ್ಧೂರಿ ಮದುವೆಗೆ ಕಲರ್ಫುಲ್ ವೇದಿಕೆ ಸಜ್ಜಾಗಿದೆ. ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಸಂಭ್ರಮ ಇಂದಿನಿಂದ ಆರಂಭವಾಗಿದ್ದು, ಈ ವಿಚಾರ ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕೂಡ ಸೃಷ್ಟಿಯಾಗಿದೆ. ತಾರಾಜೋಡಿಯ ವಿವಾಹಕ್ಕೆ ಸಿನಿ ಉದ್ಯಮದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಈ ಮದುವೆಗೆ ಇದೀಗ ಭಾರೀ ಡಿಮ್ಯಾಂಡ್ ಒಂದು ಒಲಿದು ಬಂದಿದೆ.
ಮದುವೆಗೆ ಸಂಬಂಧಿಸಿದ ವಿಡಿಯೋ ಫುಟೇಜ್ ಸರೆಹಿಡಿಯುವ ಅವಕಾಶ ನೀಡಿದರೆ, 100 ಕೋಟಿ ರೂ. ಆಫರ್ ಮಾಡಲಾಗಿದೆಯಂತೆ. ಹೀಗೊಂದು ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ಮಾಧ್ಯಮ ವರದಿಯ ಪ್ರಕಾರ ಓಟಿಟಿ ಫ್ಲಾಟ್ಫಾರ್ಮ್ 100 ಕೋಟಿ ಆಫರ್ ಮಾಡಿದೆಯಂತೆ. ಆದರೆ, ತಾರಾಜೋಡಿಯಿಂದ ಇದುವರೆಗೂ ಯಾವುದೇ ಗ್ರೀನ್ ಸಿಗ್ನಲ್ ಬಂದಿಲ್ಲ. ಓಟಿಟಿ ಎಂಬುದು ಬಾಲಿವುಡ್ನಲ್ಲಿ ಸಾಮಾನ್ಯ ಟ್ರೆಂಡ್ ಆಗಿದ್ದು, ಸೆಲೆಬ್ರಿಟಿಗಳು ಹಣಕ್ಕಾಗಿ ಪಾಪರಾಜಿಗಳಿಗೆ ತಮ್ಮ ಮದುವೆಯ ದೃಶ್ಯಗಳನ್ನು ಚಿತ್ರೀಕರಿಸಲು ಅನುಮತಿ ನೀಡುತ್ತಾರೆ.
ಇದೀಗ ದೇಶದಲ್ಲಿ ಎಲ್ಲೆಡೆ ಓಟಿಟಿ ಟ್ರೆಂಡ್ ಸೃಷ್ಟಿಯಾಗಿದೆ. ಒಟಿಟಿ ವೇದಿಕೆಯಲ್ಲಿ ವಿಕ್ಕಿ-ಕರ್ತಿನಾರ ಅದ್ಧೂರಿ ಮದುವೆಯನ್ನು ಪ್ರಸಾರ ಮಾಡಲು ಆಸಕ್ತಿ ವಹಿಸಿದ್ದು, ಇದೇ ಮೊದಲ ಬಾರಿಗೆ ತಾರಾಜೋಡಿಯ ವಿವಾಹಕ್ಕಾಗಿ ಇಂಥದ್ದೊಂದು ಆಫರ್ ಅನ್ನು ಓಟಿಟಿ ನೀಡಿದೆ. ಒಂದು ವೇಳೆ ತಾರಾಜೋಡಿ ಹಸಿರು ನಿಶಾನೆ ತೋರಿದ್ದಲ್ಲಿ ಇಡೀ ವಿವಾಹ ಸಂಭ್ರಮ ಒಟಿಟಿಯಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ, ಫ್ರೆಂಡ್ಸ್, ಆಪ್ತರು ಮತ್ತು ಸೆಲೆಬ್ರಿಟಿಗಳ ಎಕ್ಸ್ಕ್ಲೂಸಿವ್ ಸಂದರ್ಶನಗಳು ಕೂಡ ಪ್ರಸಾರವಾಗಲಿದೆ.
ಡಿಸೆಂಬರ್ 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿಕ್ಕಿಕ್ಯಾಟ್ ಮದುವೆ ನಡೆಯಲಿದೆ. ಇಂದಿನಿಂದಲೇ ಮದುವೆ ಸಂಭ್ರಮ ಆರಂಭವಾಗಿದೆ. (ಏಜೆನ್ಸೀಸ್)
ಕೇವಲ 7 ಗಂಟೆಯಲ್ಲಿ 919 ಪುರುಷರ ಜತೆ ಲೈಂಗಿಕ ಸಂಪರ್ಕ: ಈಕೆ ಹೇಳೋದನ್ನು ಕೇಳಿದ್ರೆ ಹೀಗೂ ಉಂಟಾ ಅಂತೀರಿ!
ಎಟಿಎಂ ಯಂತ್ರಕ್ಕೇ ಸೈಬರ್ ಕಳ್ಳರ ಕನ್ನ!; ಡೇಟಾ ಕದ್ದು 13.50 ಲಕ್ಷ ರೂ. ವರ್ಗ, ಒಂದು ತಿಂಗಳಲ್ಲಿ 4 ಪ್ರಕರಣ
ಒಳ್ಳೇ ಸ್ಕ್ರಿಪ್ಟ್ ಸಿಕ್ಕರೆ ಕನ್ನಡಕ್ಕೂ ಬರ್ತೀನಿ!: ನಟಿ ಪೂಜಾ ಹೆಗ್ಡೆ ಉತ್ತರ
ಜನವರಿಯಿಂದ ಎಟಿಎಂ ನಗದು ಸೇವೆ ದುಬಾರಿ; ಪಾವತಿಸಬೇಕಾಗುತ್ತದೆ ಹೆಚ್ಚುವರಿ ಶುಲ್ಕ