More

    ಹಲ್ಲೆಕೋರರ ವಿರುದ್ಧ ಕ್ರಮಕೈಗೊಳ್ಳಿ

    ಎನ್.ಆರ್.ಪುರ: ಇತ್ತೀಚೆಗೆ ಬೆಂಗಳೂರಿನ ಶಿವಾಜಿ ನಗರದ ಕಲ್ಯಾಣ ಮಂದಿರದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಫೋಟೋಗ್ರಾಫರ್ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಬುಧವಾರ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

    ವಾಟರ್ ಟ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ಫೋಟೋಗ್ರಾಫರ್ ಅಭಿನವ ಗಿರಿರಾಜ್ ಮಾತನಾಡಿ, ಛಾಯಾಚಿತ್ರ ಗ್ರಾಹಕರಿಗೆ ರಕ್ಷಣೆ ನಿಡಬೇಕು ಎಂದು ಒತ್ತಾಯಿಸಿದರು. ಛಾಯಾಚಿತ್ರ ಗ್ರಾಹಕರ ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ಎಲಿಯಾಸ್ ಮಾತನಾಡಿ, ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಮಾಥಾಯ್, ಮಾಜಿ ಅಧ್ಯಕ್ಷ ಮೇಘ ಗಿರಿ, ಕಾರ್ಯದರ್ಶಿ ಪುನೀತ್, ಪದಾಧಿಕಾರಿಗಳಾದ ಶಿವಶಂಕರ್, ಪ್ರವೀಣ್, ಅರ್ಜುನ್, ಭರತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts