ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 42,766 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗಿನ ಒಟ್ಟು ಕರೊನಾ ಪ್ರಕರಣ ಸಂಖ್ಯೆ 3,07,95,716 ಕ್ಕೆ ತಲುಪಿದೆ.
ಕೇರಳದಲ್ಲಿ 13,563 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತದ ಅತಿ ಹೆಚ್ಚು ನಿತ್ಯ ಪ್ರಕರಣಗಳು ಈ ರಾಜ್ಯದಲ್ಲಿ ಕಂಡುಬಂದಿವೆ. ಮಹಾರಾಷ್ಟ್ರದಲ್ಲಿ 8,992, ತಮಿಳುನಾಡಿನಲ್ಲಿ 3,039 ಮತ್ತು ಕರ್ನಾಟಕದಲ್ಲಿ 2,290 ಹೊಸ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ರಸ್ತೆಬಿದಿ ನೇಣುಬಿಗಿದ ಸ್ಥಿತಿಯಲ್ಲಿ ಪೊಲೀಸಪ್ಪನ ಪತ್ನಿ ಶವ ಪತ್ತೆ!
ಪಾಸಿಟಿವಿಟಿ ರೇಟ್ ಶೇ. 2.19 ರಷ್ಟಿದ್ದು, ಕಳೆದ 19 ದಿನಗಳಿಂದ ಈ ದರವು ಶೇ. 3 ಕ್ಕಿಂತ ಕಡಿಮೆಯೇ ಇದೆ. ಸೋಂಕಿನಿಂದ ಚೇತರಿಕೆಯ ದರವು ಶೇ. 97.20 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,206 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ. (ಏಜೆನ್ಸೀಸ್)
10 ಕೋಟಿ ರೂ. ಆಸ್ತಿ ಮಾಡಿ ಸಸ್ಪೆಂಡಾದ ಐಪಿಎಸ್ ಅಧಿಕಾರಿ! ದೇಶದ್ರೋಹದ ಕೇಸ್ ದಾಖಲು
ಭಾರತಕ್ಕೆ ಅಮೆರಿಕದ ಹೊಸ ಅಂಬಾಸಿಡರ್ ಆಗಲು ಲಾಸ್ಏಂಜಲೀಸ್ ಮೇಯರ್ ಎರಿಕ್ ಎಂ.ಗಾರ್ಸೆಟ್ಟಿ ಹೆಸರು