ನವದೆಹಲಿ : ಭಾರತದಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣ ಮೀರಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಮತ್ತು ಬೆಡ್ಗಳ ಕೊರತೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್ಡಿಒ), ಪಿಎಂ ಕೇರ್ಸ್ ಫಂಡ್ನಡಿ ಮಂಜೂರಾಗಿರುವ ಹಣದಲ್ಲಿ ಮುಂದಿನ ಮೂರು ತಿಂಗಳಲ್ಲಿ 500 ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್(ಎಂಒಪಿ)ಗಳನ್ನು ಸ್ಥಾಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
“ತೇಜಸ್ ಲೈಟ್ ಕಾಂಬಾಟ್ ಏರ್ಕ್ರಾಫ್ಟ್ನಲ್ಲಿ ಆಕ್ಸಿಜನ್ ಉತ್ಪಾದಿಸಲು ಡಿಆರ್ಡಿಒ ರೂಪಿಸಿರುವ ಎಂಒಪಿ ತಂತ್ರಜ್ಞಾನವು ಕರೊನಾ ರೋಗಿಗಳಿಗೆ ಉಂಟಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಹಾಯ ಮಾಡಲಿದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ. ಡಿಆರ್ಡಿಒದ ಎಂಒಪಿ ಒಂದು ನಿಮಿಷಕ್ಕೆ 1,000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಶಕ್ತಿ ಹೊಂದಿದೆ. ಈ ವ್ಯವಸ್ಥೆಯು ನಿಮಿಷಕ್ಕೆ 5 ಲೀಟರ್ ಫ್ಲೋ ರೇಟ್ನಲ್ಲಿ 190 ರೋಗಿಗಳಿಗೆ ಉಪಯುಕ್ತವಾಗಬಲ್ಲದು ಮತ್ತು ದಿನಕ್ಕೆ 195 ಸಿಲಿಂಡರ್ಗಳನ್ನು ಭರ್ತಿ ಮಾಡಬಲ್ಲದು ಎಂದು ಡಿಆರ್ಡಿಒ ಹೇಳಿಕೆಯಲ್ಲಿ ವಿವರಿಸಿದೆ.
ಇದನ್ನೂ ಓದಿ: ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ
ಡಿಆರ್ಡಿಒ ಈ ಎಂಒಪಿ ತಂತ್ರಜ್ಞಾನವನ್ನು ಬೆಂಗಳೂರಿನ ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಕೊಯಮತ್ತೂರಿನ ಟ್ರೈಡೆಂಟ್ ನ್ಯೂಮ್ಯಾಟಿಕ್ಸ್ ಕಂಪೆನಿಗಳಿಗೆ ವರ್ಗಾಯಿಸಿದ್ದು, ಈ ಎರಡು ಕಂಪನಿಗಳು 380 ಆಕ್ಸಿಜನ್ ಪ್ಲ್ಯಾಂಟ್ಗಳನ್ನು ಸ್ಥಾಪಿಸಲಿವೆ. ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸಬಲ್ಲ ಇನ್ನೂ 120 ಆಕ್ಸಿಜನ್ ಪ್ಲ್ಯಾಂಟ್ಗಳನ್ನು ಡೆಹ್ರಾಡೂನಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ಸ್ಥಾಪಿಸಲಿವೆ ಎನ್ನಲಾಗಿದೆ. (ಏಜೆನ್ಸೀಸ್)
ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !
ಸರ್ಕಾರದ ಎಚ್ಚರಿಕೆ ಘಂಟೆ : ಮನೆಯಲ್ಲೂ ಮಾಸ್ಕ್ ತೊಡಬೇಕಾದ ಸಮಯ ಬಂದಿದೆ !