More

    ಇದೇ ಕಾರಣಕ್ಕೆ ಬೋಯಿಂಗ್​ 737ವಿಮಾನದ 90 ಪೈಲೆಟ್​ಗಳಿಗೆ ನಿರ್ಬಂಧ!

    ನವದೆಹಲಿ: ವಿಮಾನ ದುರಂತಗಳಲ್ಲಿ ಬಹುತೇಕ ಬೋಯಿಂಗ್​ ವಿಮಾನಗಳ ಪಾತ್ರ ಹೆಚ್ಚಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಪೈಲೆಟ್​ಗಳಿಗೂ ಸೂಕ್ತ ತರಬೇತಿ ಅಗತ್ಯವಿರುವುದರಿಂದ ಸದ್ಯ ಸ್ಪೈಸ್​ಜೆಟ್​ನ ಪೈಲೆಟ್​ಗಳಿಗೆ ನಿರ್ಬಂಧ ಹೇರಲಾಗಿದೆ.

    ಸ್ಪೈಸ್​ಜೆಟ್​ನ 90 ಪೈಲೆಟ್​ಗಳಿಗೆ ಮರುತರಬೇತಿ ನೀಡುವಂತೆ ನಾಗರಿಕ ವಿಮಾನ ಯಾನ ಸಚಿವಾಲಯ ಸೂಚಿಸಿದೆ.ಬೋಯಿಂಗ್​ 737 ವಿಮಾನ ಹಾರಾಟ ಪರೀಕ್ಷಾರ್ಥ ನಡೆಸಿದ ವೇಳೆ ಪೈಲೆಟ್​ಗಳು ವಿಮಾನ ಹಾರಾಟವನ್ನು ಸರಿಯಾಗಿ ನಡೆಸದ ಕಾರಣದಿಂದ ಸ್ಪೈಸ್​ಜೆಟ್​ ಮತ್ತೊಮ್ಮೆ ತನ್ನ ಪೈಲೆಟ್​ಗಳಿಗೆ ತರಬೇತಿ ಕೊಡಿ ಎಂದು ಹೇಳಿದೆ.

    ಯಶಸ್ವಿಯಾಗಿ ವಿಮಾನ ಹಾರಾಟ ನಡೆಸುವವರೆಗೂ ಈ ಪೈಲೆಟ್​ಗಳಿಗೆ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್​ ಕುಮಾರ್ ತಿಳಿಸಿದ್ದಾರೆ.

    ವಿಶ್ವದಾದ್ಯಂತ 2019ರ ನಂತರ ಬೋಯಿಂಗ್​ 737 ವಿಮಾನ ದುರಂತದಲ್ಲಿ ಈವರೆಗೆ 346 ಮಂದಿ ಸಾವನ್ನಪ್ಪಿದ್ದಾರೆ. ಬೋಯಿಂಗ್​ ವಿಮಾನ ತಯಾರಿಕೆಯಲ್ಲೂ ದೋಷ ವಿರಬಹುದೆಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts