More

    ಶೇಕಡ 80 ರಷ್ಟು ವಯಸ್ಕರಿಗೆ ಲಸಿಕೀಕರಣ ಮುಗಿಸಿದೆ, ಈ ದೇಶ!

    ಸಿಡ್ನಿ: ಹದಿನಾರು ವರ್ಷ ಮೇಲ್ಪಟ್ಟ ಶೇಕಡ 80 ರಷ್ಟು ನಾಗರೀಕರಿಗೆ ಕರೊನಾ ಲಸಿಕೆ ನೀಡುವ ಗುರಿಯನ್ನು ಆಸ್ಟ್ರೇಲಿಯಾ ಸಾಧಿಸಿದೆ ಎಂದು ದೇಶದ ಪ್ರಧಾನಿ ಸ್ಕಾಟ್​ ಮಾರ್ರಿಸನ್​ ಹೇಳಿದ್ದಾರೆ. ಇದೊಂದು ‘ಅತ್ಯದ್ಭುತ ಮೈಲಿಗಲ್ಲು’ ಎಂದಿರುವ ಮಾರ್ರಿಸನ್​, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಲಸಿಕೀಕೃತ ರಾಷ್ಟ್ರಗಳಲ್ಲಿ ಒಂದಾಗುವ ಪಥದಲ್ಲಿ ಆಸ್ಟ್ರೇಲಿಯಾ ಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    70 ವರ್ಷ ಮೇಲ್ಪಟ್ಟ ಶೇಕಡ 99 ರಷ್ಟು ಆಸ್ಟ್ರೇಲಿಯನ್ನರಿಗೆ ಅದಾಗಲೇ ಮೊದಲನೇ ಡೋಸ್​ ಕರೊನಾ ಲಸಿಕೆ ನೀಡಲಾಗಿದೆ ಹಾಗೂ ಈ ವಯೋಮಾನದ ಶೇ. 90 ರಷ್ಟು ಜನರಿಗೆ ಎರಡನೇ ಲಸಿಕೆಯನ್ನೂ ನೀಡಲಾಗಿದೆ ಎಂದು ಪ್ರಧಾನಿ ಮಾರ್ರಿಸನ್​ ತಿಳಿಸಿದ್ದಾರೆ. ದೇಶದಲ್ಲಿ ಚಟುವಟಿಕೆಗಳನ್ನು ಸುರಕ್ಷಿತವಾಗಿ ತೆರೆದು ಬದುಕಲು ಸಹಕಾರಿಯಾದ ಕರೊನಾ ಲಸಿಕೆಯನ್ನು ಇಂದೇ ಪಡೆಯಿರಿ ಎಂದು ಲಸಿಕೆ ಪಡೆದಿಲ್ಲದ ಜನರಿಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್)

    ಥಿಯೇಟರ್​​ನ ಗೋಡೆಯೊಳಗೆ ಸಿಕ್ಕಿಕೊಂಡಿದ್ದ ಬೆತ್ತಲೆ ಮನುಷ್ಯ!

    ಬಾಕ್ಸ್​ ಆಫೀಸಲ್ಲಿ ‘ಸೂರ್ಯವಂಶಿ’ಗೆ ಬಂಪರ್​! ಮೊದಲನೇ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts