More

    7 ವರ್ಷದ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನುಷ ಹಲ್ಲೆ; ಪ್ರಾಣ ಕಳೆದುಕೊಂಡ ಬಾಲಕ

    ಪಟ್ನಾ: ಹೋಮ್​ವರ್ಕ್​ ಮಾಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕನ ಅಮಾನುಷ ಹಲ್ಲೆಯಿಂದಾಗಿ 7 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ಸಹರ್ಸ್​​ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಬಾಲಕನನ್ನು ಆದಿತ್ಯ ಕುಮಾರ್​(7) ಎಂದು ಗುರುತಿಸಲಾಗಿದೆ. ಸಹರ್ಸ ಜಿಲ್ಲೆಯ ಖಾಸಗಿ ಶಾಲೆಯ ಹಾಸ್ಟೆಲ್​ನಲ್ಲಿ ವಾಸವಿದ್ದ ಬಾಲಕನ ಪೋಷಕರು ಪಕ್ಕದ ಮಾಧೇಪುರ್​ ಜಿಲ್ಲೆಯ ಭಾರಾಹಿ ಗ್ರಾಮದಲ್ಲಿ ವಾಸವಿದ್ದರು.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಪ್ರಕಾಶ್​ ಮಾರ್ಚ್​ 14ರಂದುಬ ನಮ್ಮ ಮಗನನ್ನ ಶಾಲೆಗೆ ಕಳುಹಿಸಿದ್ದೇವು ಶುಕ್ರವಾರ ನಮ್ಮಗೆ ಶಾಲಾ ಆಡಳಿತ ಮಂಡಳಿಯವರು ಕರೆ ಮಾಡಿ ಆದಿತ್ಯ ಪ್ರಜ್ಷೆ ತಪ್ಪಿರುವುದಾಗಿ ತಿಳಿಸಿದ್ದರು. ಕೂಡಲ್ಲೇ ನಾವು ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ನನ್ನ ಮಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಆರೋಪಿ ಶಿಕ್ಷಕ ತಲೆಮಾರಿಸಿಕೊಂಡಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಘಟನೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ FIR ಧಾಖಲಿಸಲಾಗಿದೆ ಎಂದು ಸದರ್​ ಪೊಲೀಸ್​ ಠಾಣಾಧಿಕಾರಿ ಬ್ರಜೇಶ್​ ಚೌಹಾಣ್​ ತಿಳಿಸಿದ್ದಾರೆ.

    ಇದನ್ನು ಓದಿ: ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..

    ಇದನ್ನು ಓದಿ: ರಾಜ್ಯದಲ್ಲಿ ಮೂರು ದಿನ ಮಳೆ: ಹಲವು ಜಿಲ್ಲೆಗಳಲ್ಲಿ ಸೆಖೆ ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts