More

    ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ ಕೇಂದ್ರ

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯ ಆಗುವಂಥ ಏಳನೇ ವೇತನ ಆಯೋಗದ ಶಿಫಾರಸುಗಳು ಇದೀಗ ಅಂಗೀಕಾರಗೊಂಡಿದ್ದು, ಕೇಂದ್ರ ಸರ್ಕಾರ ತನ್ನ ನೌಕರರಿಗೆ ಖುಷಿ ಸುದ್ದಿಯನ್ನು ನೀಡಿದೆ.

    ರಾತ್ರಿ ಪಾಳಿ ಮಾಡುವವರಿಗೆ ನೈಟ್‌ ಶಿಫ್ಟ್‌ ಅಲೋಯೆನ್ಸ್‌ (ರಾತ್ರಿ ಕರ್ತವ್ಯ ಭತ್ಯೆ) ನೀಡಲು ಕೇಂದ್ರ ಸರ್ಕಾರ ನೀಡಲಿದೆ.

    ಜುಲೈ 13ರಂದು ಈ ಆದೇಶವು ಹೊರಬಿದ್ದಿದ್ದು, ಈ ತಿಂಗಳಿನಿಂದಲೇ ಅಂದರೆ, ಜುಲೈ 1ರಿಂದಲೇ ಇದು ಜಾರಿಗೆ ಬರಲಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಕೆಲಸ ಮಾಡುವ ಪಾಳಿಯನ್ನು ರಾತ್ರಿ ಪಾಳಿ ಎಂದು ಪರಿಗಣಿಸಲಾಗುವುದು. ಇಂಥ ಉದ್ಯೋಗಿಗಳಿಗೆ ಭತ್ಯೆ ಲಾಭ ಸಿಗಲಿದೆ.

    ಗ್ರೇಡ್ ಆಧಾರಿತವಾಗಿ ರಾತ್ರಿ ಕರ್ತವ್ಯ ಮಾಡಲು ನೌಕರರಿಗೆ ವಿಶೇಷ ಭತ್ಯೆ ನೀಡಲಾಗುವುದು. ಇದರಿಂದ ವೇತನ ಹೆಚ್ಚಾಗಲಿದೆ. ರಾತ್ರಿ ಕರ್ತವ್ಯ ಭತ್ಯೆಗಾಗಿ ಮೂಲ ವೇತನ ಮಿತಿಯನ್ನು ತಿಂಗಳಿಗೆ 43,600 ರೂಪಾಯಿ ನಿಗದಿಪಡಿಸಲಾಗಿರುವ ಕುರಿತು ಆದೇಶದಲ್ಲಿ ವಿವರಿಸಲಾಗಿದೆ.

    ಇದನ್ನೂ ಓದಿ: 710 ಕೋಟಿ ರೂಪಾಯಿ ಲಾಟರಿ ಗೆದ್ರೆ ನೀವೇನು ಮಾಡ್ತಿದ್ರಿ?- ಆದ್ರೆ ಗೆದ್ದವನು ಮಾಡಿದ್ದೇನು ನೋಡಿ!

    ಈ ಭತ್ಯೆಯ ಪಾವತಿಯು ಗಂಟೆಯ ಆಧಾರದ ಮೇಲೆ ಇರುತ್ತದೆ. ಇದು ಮೂಲವೇತನ ಮತ್ತು ಡಿಯರೆನ್ಸ್‌ ಅಲೋಯೆನ್ಸ್‌ (ಡಿ.ಎ) ಮೊತ್ತವನ್ನು 200ರಿಂದ (ಬಿಪಿ + ಡಿಎ / 200) ಭಾಗಿಸುತ್ತದೆ. ಏಳನೇ ವೇತನ ಆಯೋಗದ ಆಧಾರದ ಮೇಲೆ ಮೂಲ ವೇತನ ಮತ್ತು ಡಿ.ಎಯನ್ನು ಲೆಕ್ಕಹಾಕಲಾಗುತ್ತದೆ. ಅದೇ ಸೂತ್ರವನ್ನು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಉದ್ಯೋಗಿಗಳಿಗೆ ಅನ್ವಯಿಸಲಾಗುವುದು ಎಂದು ತಿಳಿದುಬಂದಿದೆ.

    ಕನ್ನಡಕ ಖರೀದಿಗೆ ಜಡ್ಜ್‌ಗಳಿಗೆ 50 ಸಾವಿರ ವಿಶೇಷ ಭತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts