More

    ಕನ್ನಡಕ ಖರೀದಿಗೆ ಜಡ್ಜ್‌ಗಳಿಗೆ 50 ಸಾವಿರ ವಿಶೇಷ ಭತ್ಯೆ

    ಮುಂಬೈ: ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕನ್ನಡಕ ಖರೀದಿ ಮಾಡುವ ಸಂಬಂಧ 50 ಸಾವಿರ ರೂಪಾಯಿಗಳ ವಿಶೇಷ ಭತ್ಯೆಯನ್ನು ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿದೆ.

    ಮುಂಬೈ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಅನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ. ಪ್ರತಿವರ್ಷ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳ ವಿಶೇಷ ಭತ್ಯೆ ಇದಾಗಿದೆ.

    ಕಾನೂನು ಮತ್ತು ನ್ಯಾಯಾಂಗ ಇಲಾಖೆ ಈ ಆದೇಶ ಹೊರಡಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಅವರ ಪತಿ/ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಈ ಭತ್ಯೆ ಅನ್ವಯ ಆಗುತ್ತದೆ. ನ್ಯಾಯಮೂರ್ತಿಗಳ ಅವಲಂಬಿತರು ಯಾರು ಬೇಕಾದರೂ ಈ ಹಣವನ್ನು ಖರೀದಿಯ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

    ಜುಲೈ 10ರಂದು ಹೊರಬಿದ್ದ ಈ ಆದೇಶಕ್ಕೆ ಕಾನೂನು ಸಲಹೆಗಾರ ಹಾಗೂ ಜಂಟಿ ಕಾರ್ಯದರ್ಶಿ ಯೋಗೇಶ್‌ ಅಮೇತಾ ಸಹಿ ಮಾಡಿದ್ದಾರೆ.

    ಮತ್ತೆ ಬರ್ತಿದ್ದಾರೆ ದತ್ತಾ ಮೇಸ್ಟ್ರು: ಗಣಿತ, ವಿಜ್ಞಾನ ಬೋಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts