More

    ಈ ಬಾರಿಯ ವಿಷ್ಣುವರ್ಧನ್ ಹುಟ್ಟುಹಬ್ಬದ ವಿಶೇಷ ಏನು?

    ಡಾ. ವಿಷ್ಣುವರ್ಧನ್​ ಅವರ ಹುಟ್ಟುಹಬ್ಬ ಸಮೀಪಿಸುತ್ತಿದೆ. ಒಂದು ಕಡೆ ಡಾ. ವಿಷ್ಣುವರ್ಧನ್​ ಅವರ ಸ್ಮಾರಕಕ್ಕೆ ಮೈಸೂರಿನಲ್ಲಿ ಭೂಮಿಪೂಜೆ ನೆರವೇರುತ್ತಿದ್ದರೆ, ಇನ್ನೊಂದು ಕಡೆ ಅಭಿಮಾನಿಗಳು ಇನ್ನೊಂದು ಸಾರ್ಥಕ ರೀತಿಯಲ್ಲಿ ವಿಷ್ಣು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

    ಪ್ರಮುಖವಾಗಿ ವಿಷ್ಣುವರ್ಧನ್​ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ 70 ಸಾವಿರ ಗಿಡಗಳನ್ನು ನೆಡಬೇಕು ಎಂದು ಡಾ.ವಿಷ್ಣು ಸೇನಾ ಸಮತಿ ಯೋಜನೆಯೊಂದನ್ನು ಹಾಕಿಕೊಂಡಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಅಭಿಮಾನಿಗಳಿಗೆ ಕರೆ ನೀಡಿದ್ದು, ರಾಜ್ಯದ್ಯಂತ 12 ಸಾವಿರ ಗಿಡಗಳನ್ನು ನೆಡಲಾಗಿದೆ.

    ಇದನ್ನೂ ಓದಿ: ಆನೆ ಲದ್ದಿ ಟೀ ಕುಡೀತಿದ್ದ ಅಕ್ಷಯ್ ಕುಮಾರ್ ಗೋಮೂತ್ರ ಸೇವನೆಯ ರಹಸ್ಯವನ್ನೂ ಬಿಚ್ಚಿಟ್ರು!

    ಈ ಬಾರಿಯ ವಿಷ್ಣುವರ್ಧನ್ ಹುಟ್ಟುಹಬ್ಬದ ವಿಶೇಷ ಏನು?

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಈ ಬಾರಿ 70 ಸಾವಿರ ಗಿಡವನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ 300 ಜನ ರಾಜ್ಯಾದ್ಯಂತ ಮುಂದೆ ಬಂದಿದ್ದಾರೆ. ಇದು ಒತ್ತಾಯ ಅಲ್ಲ. ವಿಷ್ಣುವರ್ಧನ್​ ಅವರ ಅಭಿಮಾನಿಗಳಾಗಿ ಅವರ ಅಭಿಮಾನಕ್ಕೆ ಕನಿಷ್ಠ 20 ಸಾವಿರ ಸಸಿಗಳನ್ನಾದರೂ ನೆಟ್ಟರೆ, ಶ್ರಮ ಸಾರ್ಥಕ’ ಎನ್ನುತ್ತಾರೆ ಶ್ರೀನಿವಾಸ್​.

    ಇನ್ನು ಸೆಪ್ಟೆಂಬರ್​ 18ರಂದು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅವರು 500 ಗಿಡಗಳನ್ನು ನೆಡುವುದಕ್ಕೆ ಸಿದ್ಧತೆ ನಡೆಸಿದ್ದು, ಈಗಾಗಲೇ ಗುಂಡಿಗಳನ್ನು ತೆಗೆಯಲಾಗುತ್ತಿದೆ. ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ವಿಷ್ಣುವರ್ಧನ್​ ಅವರ ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ.

    ಇದನ್ನೂ ಓದಿ: ಚಪ್ಪಲಿಗಳಿಗೆ ಫ್ರೇಮ್​ ಹಾಕಿಸಿ ಅರ್ನಬ್​ ಗೋಸ್ವಾಮಿ ಆಫೀಸ್​ಗೆ ತೆಗೆದುಕೊಂಡು ಹೋದ ಅನುರಾಗ್ ಕಶ್ಯಪ್​

    ಇದಲ್ಲದೆ, ಸಾವಿರ ಯೂನಿಟ್​ ರಕ್ತದಾನ ಮಾಡುವ ಬಗ್ಗೆ ಅಭಿಮಾನಿಗಳು ಮುಮದಾಗಿದ್ದು, ಈಗಾಗಲೇ 300 ಯೂನಿಟ್​ ಕೊಡಲಾಗಿದ್ದು, ಬಾಕಿ ಇರುವ 700 ಯೂನಿಟ್​ ರಕ್ತವನ್ನು ವಿಷ್ಣು ಅವರ ಹುಟ್ಟುಹಬ್ಬದಲ್ಲಿ ಶೇಖರಿಸಲಾಗುವುದು ಎಂದು ಶ್ರೀನಿವಾಸ್​ ಹೇಳುತ್ತಾರೆ.

    ಇದಲ್ಲದೆ, ದಂಡ ಕಟ್ಟಿಲಿಕ್ಕಾಗದೆ ಜೈಲಿನಲ್ಲಿ ಹಲವು ದಿನಗಳಿಂದ ಇರುವ 10 ಖೈದಿಗಳನ್ನು ಗುರುತಿಸಲಾಗಿದ್ದು, ದಂಡ ಕಟ್ಟಿ ಅವರನ್ನು ಬಿಡಸಲಾಗುತ್ತದಂತೆ. ಈಗಾಗಲೇ ಗುಲ್ಬರ್ಗಾ ಜೈಲಿನಲ್ಲಿರುವ ಏಳು ಮತ್ತು ಹುಬ್ಬಳ್ಳಿಯಲ್ಲಿರುವ ಮೂವರು ಕೈದಿಗಳನ್ನು ಗುರುತಿಸಲಾಗಿದ್ದು, ಸದ್ಯದಲ್ಲೇ ಸೂಕ್ತ ದಂಡ ಕಟ್ಟಿ ಬಿಡಿಸಲಾಗುವುದು ಎಂದು ಮಾಹಿತಿ ನೀಡುತ್ತಾರೆ ವೀರಕಪುತ್ರ ಶ್ರೀನಿವಾಸ್​.

    ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts