More

    ಮೆಡಿಕಲ್​ ಕಾಲೇಜಿನ ಏಳು ಮಂದಿಗೆ ಕರೊನಾ ಸೋಂಕು

    ಚಾಮರಾಜನಗರ: ರಾಜ್ಯದಲ್ಲಿ ಕರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಇಂದು ಚಾಮರಾಜನಗರದ ಸರ್ಕಾರಿ ಮೆಡಿಕಲ್​ ಕಾಲೇಜಿನ 6 ವಿದ್ಯಾರ್ಥಿಗಳಿಗೆ ಹಾಗೂ ಒಬ್ಬ ಇಂಟರ್ನಿಗೆ ಹೊಸದಾಗಿ ಕರೊನಾ ಸೋಂಕು ದೃಢಪಟ್ಟಿದೆ.

    ಆರೋಗ್ಯ ಇಲಾಖೆಯಿಂದ ಶನಿವಾರ 325 ಮಂದಿಗೆ ಕರೊನಾ ಟೆಸ್ಟ್ ಮಾಡಲಾಗಿತ್ತು. ಅವರಲ್ಲಿ ಆರು ಮಂದಿ ವಿದ್ಯಾರ್ಥಿಗಳಿಗೆ ಮತ್ತು ಓರ್ವ ಇಂಟರ್ನಿಗೆ ಸೋಂಕು ಪತ್ತೆಯಾಗಿದೆ. ಎಲ್ಲರೂ ಎಸಿಂಪ್ಟಮ್ಯಾಟಿಕ್ ಆಗಿದ್ದು, ಆರೋಗ್ಯವಾಗಿದ್ದಾರೆ. ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇದನ್ನೂ ಓದಿ: ಮತ್ತೆ ಸ್ಫೋಟಿಸಿತು ಕರೊನಾ! ಮೊರಾರ್ಜಿ ವಸತಿ ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಸೋಂಕು

    ಹಾಸ್ಟೆಲ್ ಸೀಲ್ ಡೌನ್ ಮಾಡಲಾಗಿದೆ. ಉಳಿದ 150 ಮಂದಿಗೆ ಇಂದು ಕರೊನಾ ಪರೀಕ್ಷೆ ಮಾಡಲಾಗಿದೆ, ಯಾರಿಗೂ ಪಾಸಿಟಿವ್ ಬಂದಿಲ್ಲ. ಈ ಕಾಲೇಜಿನಲ್ಲಿ ಕೇರಳ ಮೂಲದವರು ಯಾರೂ ಇಲ್ಲ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

    30 ರೂಪಾಂತರಗಳನ್ನು ಹೊಂದಿರುವ ಒಮಿಕ್ರಾನ್​! ಲಸಿಕೆಯನ್ನೂ ಬೈಪಾಸ್​ ಮಾಡುವುದೇ?

    ವಿವಾದಿತ ಕೃಷಿ ಕಾಯ್ದೆಗಳು ರದ್ದು; ಗದ್ದಲದ ನಡುವೆ ಮಸೂದೆ ಅಂಗೀಕರಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts