More

    ಪಾಸ್​ ಕೇಳಿದ್ದ ಎಎಸ್​ಐ ಕೈ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ್ದವರ ಬಂಧನ: ತರಕಾರಿ ಕೊಳ್ಳಲು ಬಂದವರಿಂದ ಮಾರಣಾಂತಿಕ ಹಲ್ಲೆ

    ಪಟಿಯಾಲಾ: ನಗರದ ತರಕಾರಿ ಮಾರುಕಟ್ಟೆ ಪ್ರವೇಶಿಸಲು ಪಾಸ್​ ಕೇಳಿದ್ದ ಅಸಿಸ್ಟೆಂಟ್​ ಸಬ್ ಇನ್​ಸ್ಪೆಕ್ಟರ್​ ಕೈಯನ್ನೇ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ್ದ ಏಳು ಜನರನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ.

    ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದವರನ್ನು ಪೊಲೀಸರು ಬೆನ್ನತ್ತಿದ್ದರು. ಹಲ್ಲೆಕೋರರು ಪಟಿಯಾಲಾ ಹೊರವಲಯದ ಬಲ್ಬೆರಾ ಗ್ರಾಮದಲ್ಲಿದ್ದ ಸಿಖ್ಖರ ನಿಹಾಂಗ್​ ಪಂಗಡಕ್ಕೆ ಸೇರಿದ ಗುರುದ್ವಾರ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಬಳಿಕ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಮನ್​ದೀಪ್​ ಸಿಂಗ್​ ಹಾಗೂ ಇತರ ಅಧಿಕಾರಿಗಳು ಹೆಚ್ಚುವರಿ ಪೊಲೀಸ್​ ಪಡೆಯೊಂದಿಗೆ ಗುರುದ್ವಾರ ಸುತ್ತುವರಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಏಳು ಜನರನ್ನು ಬಂಧಿಸಲಾಗಿದೆ. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಕಾರ್ಯಾಚರಣೆಯ ನೇತೃತ್ವವನ್ನು ಇನ್​ಸ್ಪೆಕ್ಟರ್​ ಜನರಲ್​ ಜತಿಂದರ್​ ಸಿಂಗ್​ ಔಲಾಖ್​ ವಹಿಸಿದ್ದರು ಎಂದು ಪಂಜಾಬ್​ನ ವಿಶೇಷ ಕಾರ್ಯದರ್ಶಿ ಕರಣ್​ ಬೀರ್​ ಸಿಂಗ್​ ಸಿಧು ಮಾಹಿತಿ ನಿಡಿದ್ದಾರೆ.

    ಎಎಸ್​ಐಗೆ ಪ್ಲಾಸ್ಟಿಕ್​ ಸರ್ಜರಿ: ಹಲ್ಲೆಯಿಂದಾಗಿ ಎಡಗೈ ಕಳೆದುಕೊಂಡಿರುವ ಎಎಸ್​ಐ ಹರ್ಜಿತ್​ ಸಿಂಗ್​ಗೆ ಚಂಡಿಗಢದ ಪಿಜಿಐ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನುರಿತ ಪ್ಲಾಸ್ಟಿಕ್​ ಸರ್ಜನ್​ಗಳು ಹರ್ಜಿತ್​ ಸಿಂಗ್​ಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪಂಜಾಬ್​ ಪೊಲೀಸ್​ ಮಹಾನಿರ್ದೇಶಕರು ತಿಳಿಸಿದ್ದಾರೆ.

    ಘಟನೆ ಹಿನ್ನೆಲೆ: ಬೆಳಗ್ಗೆ 6 ಗಂಟೆ ವೇಳೆಗೆ ನಿಹಾಂಗ್​ ಎಂದು ಕರೆಯಲಾಗುವ ಸಿಖ್​ ಪಂಗಡದ ಕೆಲ ಸದಸ್ಯರು ತರಕಾರಿ ಖರೀದಿಸಲೆಂದು ಇಲ್ಲಿನ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದರು. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಪಂಜಾಬ್​ನಲ್ಲಿ ಕಫ್ಯೂ ವಿಧಿಸಲಾಗಿದೆ. ಜನರು ಹೊರಬರಬೇಕೆಂದರೆ ಪೊಲೀಸರಿಂದ ಪಾಸ್​ ಪಡೆಯಬೇಕು. ಅಂತೆಯೇ, ಮಾರುಕಟ್ಟೆ ಸಿಬ್ಬಂದಿ ಪಾಸ್​ ತೋರಿಸುವಂತೆ ಕೇಳಿದ್ದಾನೆ. ಪಾಸ್​ ಇಲ್ಲದ ಕಾರಣ ಅವರನ್ನು ಒಳಬಿಟ್ಟಿಲ್ಲ. ಅವನ ಮೇಲೆ ಹಲ್ಲೆ ನಡೆಸಿದ ಗುಂಪು ಮಾರ್ಕೆಟ್​ ಪ್ರವೇಶಿಸಿದೆ. ಆಗ ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.

    ಜೀವವನ್ನೇ ಅಪಾಯಕ್ಕೊಡ್ಡಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ; ಕನಿಷ್ಠ ರಕ್ಷಣಾ ಸಾಧನವೂ ಇಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts