More

    68 ಜನರಿಗೆ ಸೋಂಕಿಲ್ಲ 28 ಜನರ ವರದಿ ನಿರೀಕ್ಷೆ


    ಕಲಬುರಗಿ: ಜಿಲ್ಲೆಯಲ್ಲಿ ಕ್ರಮೇಣವಾಗಿ ಕರೊನಾ ಕಾರ್ಮೋಡ ಕರಗಲಾರಂಭಿಸಿದೆ. ಇಲ್ಲಿಯವರೆಗೂ ಕರೊನಾ ತಪಾಸಣೆಗಾಗಿ ಕಳುಹಿಸಿಕೊಡಲಾಗಿದ್ದ 101 ಜನರ ಪೈಕಿ ಪರೀಕ್ಷೆಯ ವರದಿಗಳಲ್ಲಿ 68 ಜನರಿಗೆ ಕರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. 28 ಜನರ ವರದಿ ನಿರೀಕ್ಷಿಸಲಾಗುತ್ತಿದೆ. ನೆಗೆಟಿವ್ ವರದಿಗಳು ಹೆಚ್ಚಿಗೆ ಬರುತ್ತಿರುವುದು ಜನರಲ್ಲಿ ತುಸು ನೆಮ್ಮದಿ ತರಿಸಿದೆ.
    ಈವರೆಗೆ 101 ಜನ ಶಂಕಿತರ ರಕ್ತ, ಗಂಟಲು ದ್ರವ ಲ್ಯಾಬ್ ಟೆಸ್ಟ್ಗೆ ಕಳುಹಿಸಲಾಗಿದ್ದು, ಈ ಪೈಕಿ ಆರಂಭದಲ್ಲಿ ಬಂದ ಮೂರು ಪಾಸಿಟಿವ್ ಬಿಟ್ಟರೆ, ಉಳಿದೆಲ್ಲ ವರದಿಗಳು ನೆಗೆಟಿವ್ ರಿಪೋರ್ಟ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೊರಡಿಸಿರುವ ಹೆಲ್ತ್ ಬುಲೇಟಿನ್ದಲ್ಲಿ ತಿಳಿಸಿದ್ದಾರೆ.
    ತಾಂತ್ರಿಕ ಕಾರಣಗಳಿಂದ ಇಬ್ಬರ ಲ್ಯಾಬ್ ಟೆಸ್ಟ್ ಇನ್ನೂ ಆಗಿಲ್ಲ. 28 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಪ್ರೈಮರಿ ಕಾಂಟ್ಯಾಕ್ಟ್ಸ್ 99, ಸೆಕೆಂಡರಿ ಕಾಂಟ್ಯಾಕ್ಟ್ಸ್ 388, ವಿದೇಶದಿಂದ ಬಂದವರು 487 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿರುವವರ ಸಂಖ್ಯೆ ಕಡಿಮೆಯಾಗಿದ್ದು, ಈಗ 206 ಜನರನ್ನು ಮಾತ್ರ ಹೋಮ್ ಕ್ವಾರಂಟೈನ್ದಲ್ಲಿ ಇರಿಸಲಾಗಿದೆ. ಈವರೆಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 452 ಜನರನ್ನು ಮುಕ್ತಗೊಳಿಸಿ ಮುಂದಿನ ದಿನಗಳಲ್ಲಿ ಏನಾದರೂ ತಮಗೆ ಲಕ್ಷಣಗಳು ಗೋಚರಿಸಿದರೆ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. 33 ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
    ಅಧಿಕಾರಿಗಳ ಸಂಪರ್ಕ
    ಡಿಎಚ್ಓ 94498 43053, ಜಿಲ್ಲಾ ಸರ್ಜನ್ 94498 43258, ಕಲಬುರಗಿ ತಾಲೂಕು ಆರೋಗ್ಯಾಧಿಕಾರಿ 94486 52625, ಆಳಂದ ಟಿಎಚ್ಓ 98801 66490, ಅಫಜಲಪುರ ಟಿಎಚ್ಓ 78292 77554, ಚಿತ್ತಾಪುರ ಟಿಎಚ್ಓ 98457 08581, ಚಿಂಚೋಳಿ ಟಿಎಚ್ಓ 97419 70999, ಜೇವಗರ್ಿ ಟಿಎಚ್ಓ 90087 90021, ಸೇಡಂ ಟಿಎಚ್ಓ 94484 41770, ಸಹಾಯವಾಣಿ ನಂ. ಡಿಎಸ್ಯು ಕಲಬುರಗಿ 08472-268648. ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ 08472-278648/ 278698/ 278604/278677.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts