More

    ಐದು ಭಾಷೆಯಲ್ಲಿ ನಿರ್ಮಾಣವಾಗಿದೆ ‘666’ ವೆಬ್ ಸಿರೀಸ್

    ಬೆಂಗಳೂರು: ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವೆಬ್ ಸಿರೀಸ್​ಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಅಲ್ಲಲ್ಲಿ ಒಂದಿಷ್ಟು ಪ್ರಯತ್ನಗಳಾಗುತ್ತಿರುವುದು ಹೌದಾದರೂ, ಬೇರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡದಲ್ಲಿ ವೆಬ್​ ಸೀರೀಸ್​ ಮಾಡುವವರ ಮತ್ತು ನೋಡುವವರ ಸಂಖ್ಯೆ ಸಹ ಕಡಿಮೆಯೇ. ಈ ಹಿಂದೆ, ಕಿರುಚಿತ್ರ ನಿರ್ದೇಶಿಸಿದ್ದ ರಂಗಸ್ವಾಮಿ ಎನ್ನುವವರು ಇದೇ ಮೊದಲ ಬಾರಿಗೆ ‘666’ ಎಂಬ ವೆಬ್​ಸರಣಿಯನ್ನು ನಿರ್ಮಿಸಿ-ನಿರ್ದೇಶನ ಮಾಡಿದ್ದಾರೆ.. ಇತ್ತೀಚೆಗೆ ಈ ಸರಣಿಯ ಮೋಷನ್ ಟೀಸರ್ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ಸರ್​ಪ್ರೖೆಸ್ ನೀಡಿದ ಅಮಿತಾಭ್ ಬಚ್ಚನ್

    ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿಗೆ ಸಿನಿಮಾ ಎಂದರೆ ಆಸಕ್ತಿ. ಅದೇ ಕಾರಣಕ್ಕೆ ಅವರು ‘275’, ‘ಡೋಂಟ್ ವಿಸ್ಪರ್’, ‘ನಿಹಾರಿಕ’ ಸೇರಿದಂತೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ್ದರು. ಇದೀಗ ಅದೇ ಅನುಭವದ ಹಿನ್ನೆಲೆಯಲ್ಲಿ ಏಳು ಕಂತುಗಳುಳ್ಳ ವೆಬ್ ಸಿರೀಸ್ ನಿರ್ದೇಶಿಸಿ, ನಿರ್ಮಾಣವನ್ನು ಮಾಡಿದ್ದಾರೆ.

    ಕೋಡೆಕ್ಸ್ ಗಿಗಾಸ್ ಆಧರಿಸಿ ‘666’ ಎಂಬ ವೆಬ್​​ ಸಿರೀಸ್ ಮಾಡಿರುವ ಅವರು, ತಾವೇ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಹಾರಾರ್, ಥ್ರಿಲ್ಲರ್ ಜಾನರ್ ಒಳಗೊಂಡ ಈ ವೆಬ್​ ಸರಣಿಯು ಏಳು ಕಂತುಗಳನ್ನು ಒಳಗೊಂಡಿದ್ದು, ಐದು ಭಾಷೆಯಲ್ಲಿ ನಿರ್ಮಾಣವಾಗಿದೆ. ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿಯಿದೆ.

    ಇದನ್ನೂ ಓದಿ: ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ದರ್ಶಿನಿ ಒಡೆಯರ್, ಶಿವಾನಿ, ಗಣೇಶ್ ನಾಯಕ್, ಕೀರ್ತಿ, ಮಂಜುನಾಥ್, ವಿವೇಕ್ ವೀಣಾ ಮುಂತಾದವರು ನಟಿಸಿರುವ ಈ ಸರಣಿಯನ್ನು ಸಿನಿಮಾರಂಗ ಬ್ಯಾನರ್​ನಡಿ ನಿರ್ದೇಶಕ ರಂಗಸ್ವಾಮಿ ನಿರ್ಮಿಸಿದ್ದಾರೆ. ಸಚಿನ್ ಬಸ್ರೂರು ಸಂಗೀತ ನಿರ್ದೇಶನ, ಅರುಣ್ ಭಾಗವತ್ ಛಾಯಾಗ್ರಹಣ ಮತ್ತು ಸಂಕಲನ ಈ ಸರಣಿಗಿದೆ.

    ಒಂದೇ ವೇದಿಕೆಯಲ್ಲಿ ರಮ್ಯಾ-ರಚಿತಾ; ಹೆಡ್ ಬುಷ್ ಪ್ರಿ-ರಿಲೀಸ್​ನಲ್ಲಿ ಸ್ಟಾರ್ ನಟಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts