More

    ₹ 650 ಕೋಟಿ ಬೆಳೆ ಸಾಲ : ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ ಮಾಹಿತಿ

     ಮಾಗಡಿ :  ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ರೈತರ ಅನುಕೂಲಕ್ಕಾಗಿ 650 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ ಮಾಹಿತಿ ನೀಡಿದರು.

    ಪಟ್ಟಣದ ಬಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶೇಷ ಠೇವಣಿ ಸಂಗ್ರಹಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸರ್ಕಾ ರದ ಸುತ್ತೊಲೆಯಂತೆ ಬೆಳೆ ಸಾಲವಾಗಿ ರೈತರಿಗೆ 650 ಕೋಟಿ ರೂ. ವಿತರಿಸಲಾಗಿದೆ. ಮಾಗಡಿ ಯಲ್ಲಿ 100 ಕೋಟಿ ರೂ. ವರೆಗೆ ಸಾಲ ನೀಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತಿ ರೈತರಿಗೆ 2 ಲಕ್ಷ ರೂ. ವರೆಗೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.

    ಸೆ.1 ರಿಂದ 30 ರವರೆಗೆ ಠೇವಣಿ ಸಂಗ್ರಹಣ ಮಾಸಾಚರಣೆ ಮೂಲಕ ಪ್ರತಿದಿನ ಠೇವಣಿ ಸಂಗ್ರಹಣೆ ಮಾಡಲಾಗುತ್ತಿದೆ, ಪ್ರತಿ ಗ್ರಾಪಂ ವ್ಯಾಪ್ತಿಗೊಂದರಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
    ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್. ಎನ್. ಅಶೋಕ್ ಮಾತನಾಡಿ, 2 ಲಕ್ಷ ರೂ. ವರೆಗೆ ಹೊಸದಾಗಿ 38 ಕೋಟಿ ಬೆಳೆ ಸಾಲ ನೀಡಲಾಗಿದೆ. ಇಲ್ಲಿಯವರೆಗೆ ನಮ್ಮ ತಾಲೂಕಿನಲ್ಲಿ 122 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ, ನಾನು ಪ್ರಥಮ ಬಾರಿಗೆ ನಿರ್ದೇಶಕನಾಗಿ ಆಯ್ಕೆಯಾದಾಗ 20 ಕೋಟಿ ರೂ. ವರೆಗೆ ಮಾತ್ರ ಬೆಳೆ ಸಾಲ ನೀಡಲಾಗುತ್ತಿತ್ತು. ಈಗ 100 ಕೋಟಿ ರೂ. ಮೀರಿದ್ದು, ಇದರ ಜೊತೆಗೆ ಸ್ರೀ ಶಕ್ತಿ ಸಂಘಗಳಿಗೆ, ವಿವಿಧ ಯೋಜನೆಗಳಿಗೆ ಮಧ್ಯಮಾವಧಿ ಸಾಲವನ್ನೂ ನೀಡಲಾಗಿದ್ದು, 29 ಸಂಘಗಳು ತಾಲೂಕಿನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಕೃಷಿಗೆ ಬೇಕಾದ ರಸಗೊಬ್ಬರ ಹಾಗೂ ಇತರ ಸಲಕರಣೆಗಳನ್ನು ಕೂಡ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆ ಮಾಡುವ ನಿಟ್ಟಿನಲ್ಲಿ ನಮ್ಮ ಬ್ಯಾಂಕ್ ಅವರ ಸಹಾಯಕ್ಕೆ ನಿಂತಿದೆ, ಆಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಶೀಘ್ರದಲ್ಲೆ ಮತ್ತೊಂದು ಶಾಖೆ ಪ್ರಾರಂಭಿಸಲಾಗುವುದು ಎಂದರು. ತಾಲೂಕಿನ 29 ಸಂಘಗಳಿಗೆ ಬೆಳೆ ಸಾಲ ಚೆಕ್ ಹಾಗೂ ಫಲಾನುಭವಿ ರೈತರಿಗೆ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.

    ಎಪಿಎಂಸಿ ನಿರ್ದೆಶಕ ಸಿ.ಎಂ.ಮಾರೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಸೋಮಣ್ಣ, ನಿರ್ದೆಶಕರಾದ ಸಿಂಗ್ರೀಗೌಡ, ಪುರಸಭಾ ಸದಸ್ಯ ಎಚ್.ಜೆ.ಪುರುಷೋತ್ತಮ್, ಬಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶಿವಣ್ಣ, ಕುದೂರು ಶಾಖೆಯ ಮ್ಯಾನೇಜರ್ ಹರ್ಷ, ತಾಪಂ ಮಾಜಿ ಅಧ್ಯಕ್ಷ ಕಾಂತರಾಜು, ದೋಣಕುಪ್ಪೆ ರಾಮಣ್ಣ, ಮೇಲ್ವಿಚಾರಕ ಬೆಟ್ಟಸ್ವಾಮಿ, ಚಕ್ರಭಾವಿ ವಿಎಸ್‌ಎಸ್‌ಎನ್ ಕಾರ್ಯ ದರ್ಶಿ ಬೈರೇಶ್ ಸೇರಿದಂತೆ 29 ವಿಎಸ್‌ಎಸ್‌ಎನ್ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಇದ್ದರು.

     

    850 ಕೋಟಿ ರೂ. ಠೇವಣಿ :  ರೈತರಿಗೆ ಮಧ್ಯಮಾವಧಿ ಸಾಲ, ನೇಕಾರಿಕೆ, ಹೈನುಗಾರಿಕೆ, ಕೋಳಿ, ಕುರಿ ಸಾಕಣೆ, ಇಟ್ಟಿಗೆ ನಿರ್ಮಾಣ, ಚಿನ್ನಾಭರಣ, ವಾಹನ, ಹಂದಿ ಸಾಕಾಣಿಕೆ ಸಾಲ ಸೇರಿ ಒಟ್ಟು 450 ಕೋಟಿ ರೂ. ವರೆಗೂ ಸಾಲ ನೀಡಲಾಗಿದೆ. ನಮ್ಮ ಬ್ಯಾಂಕ್ ಕೂಡ ಉತ್ತಮ ರೀತಿ ಕಾರ್ಯ ನಿರ್ವಹಿಸುತ್ತಿದೆ. ಅತ್ಯಾಧೂನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಆ್ಯಪ್ ಮೂಲಕ ವರ್ಗಾವಣೆ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು. ಈಗಾಗಲೇ ಜಿಲ್ಲಾ ಬ್ಯಾಂಕ್ 850 ಕೋಟಿ ರೂ. ಠೇವಣಿ ಹೊಂದಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts