More

    ಮೊಮ್ಮಕ್ಕಳ ಎದುರೇ ಅಜ್ಜ-ಅಜ್ಜಿಯ ಮದುವೆ! 60 ದಾಟಿದವರ ವಿಶೇಷ ಮದುವೆಗೆ ಮಕ್ಕಳ ಕುಟುಂಬವೇ ಅತಿಥಿಗಳು!

    ಲಖನೌ: ಹೆಣ್ಣು ಮಕ್ಕಳಿಗೆ 25 ವರ್ಷವಾಯಿತೆಂದರೆ ಸಾಕು, ಮದುವೆ ಆಗಿಬಿಡಬೇಕು ಎನ್ನುವಂತಹ ಅಘೋಷಿತ ಕಟ್ಟುಪಾಡಿನ ನಡುವೆಯೇ ಭಾರತೀಯರು ಬದುಕುತ್ತಿದ್ದಾರೆ. ಆದರೆ ಇಲ್ಲೊಂದು ಜೋಡಿ ವಿಶೇಷದರಲ್ಲಿ ವಿಶೇಷ. 28 ವರ್ಷಗಳಿಂದ ಒಟ್ಟಿಗೆ ಇರುವ ಈ ಪ್ರೇಮಿಗಳು ಇದೀಗ ಮೊಮ್ಮಕ್ಕಳು ಹುಟ್ಟಿದ ನಂತರ ಮದುವೆಯಾಗಿದ್ದಾರೆ.

    ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಇಂತದ್ದೊಂದು ವಿಶೇಷ ಮದುವೆಯಾಗಿದೆ. 65 ವರ್ಷದ ಮೋತಿಲಾಲ್ ಮತ್ತು 60 ವರ್ಷದ ಮೋಹಿನಿ ದೇವಿ ಭಾನುವಾರ ಸಂಜೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದ ಹಾಗೆ ಮೋತಿಲಾಲ್​ 28 ವರ್ಷಗಳ ಹಿಂದೆಯೇ ಮೋಹಿನಿಯನ್ನು ಇಷ್ಟಪಟ್ಟಿದ್ದು, ತನ್ನೊಂದಿಗೆ ಕರೆತಂದು ಆಕೆಯೊಂದಿಗೆ ಜೀವನ ಆರಂಭಿಸಿದ್ದನಂತೆ. ಆದರೆ ಅವರಿಬ್ಬರಿಗೆ ಮದುವೆಯಾಗಬೇಕು ಎನಿಸಿಲ್ಲ. ಅದಾದ ನಂತರ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ದು, ಅವರ ಲಾಲನೆ ಪಾಲನೆಯಲ್ಲೇ ಸಮಯ ಕಳೆದಿದ್ದು, ಮದುವೆ ಮರೆತಿದ್ದಾರೆ.

    ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟ ಈ ಜೋಡಿಗೆ ಈಗಾಗಲೇ ಮೊಮ್ಮಕ್ಕಳೂ ಇದ್ದಾರೆ. ಆದರೆ ಅವರಿಬ್ಬರ ಮದುವೆ ಕನಸು ಮಾತ್ರ ಇನ್ನೂ ಈಡೇರಿರಲಿಲ್ಲ. ಅಮ್ಮನಿಗೆ ಮದುವೆಯಾಗಬೇಕೆಂಬ ಆಸೆ ಇದೆ ಎನ್ನುವುದನ್ನು ಅರಿತಿದ್ದ ಹೆಣ್ಣು ಮಕ್ಕಳು ಅಪ್ಪ ಅಮ್ಮನಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾರೆ. ಮುಹೂರ್ತ ನಿಶ್ಚಯಿಸಿ, ಆಮಂತ್ರಣ ಪತ್ರ ಮುದ್ರಿಸಿ, ಬಂಧುಗಳು ಹಾಗೂ ಗ್ರಾಮಸ್ಥರಿಗೆ ಹಂಚಲಾಗಿದೆ. ಶುಭ ಮುಹೂರ್ತದಲ್ಲಿ ಮೋತಿಲಾಲ್​, ಮೋಹಿನಿಯ ಕೊರಳಿಗೆ ತಾಳಿ ಕಟ್ಟಿದ್ದಾನೆ. ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧುಗಳು ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ. ಮದುವೆಯಲ್ಲಿ ಮಂಗಳವಾದ್ಯಗಳ ಜತೆ ನೃತ್ಯವನ್ನೂ ಆಯೋಜಿಸಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts