More

    VIDEO | 51ನೇ ವಯಸ್ಸಿನಲ್ಲೂ ಜಾಂಟಿ ರೋಡ್ಸ್ ಫೀಲ್ಡಿಂಗ್ ಹೇಗಿದೆ ನೋಡಿ!

    ಬೆಂಗಳೂರು: ಓಟಕ್ಕೆ ಪಿಟಿ ಉಷಾ, ಸೌಂದರ್ಯಕ್ಕೆ ಐಶ್ವರ್ಯಾ ರೈ ಮತ್ತು ದೇಹದಾರ್ಢ್ಯಕ್ಕೆ ಸಲ್ಮಾನ್ ಖಾನ್ ಹೆಸರು ತಟ್ಟನೆ ನೆನಪಾಗುವಂತೆ ಕ್ರಿಕೆಟ್‌ನಲ್ಲಿ ಚುರುಕಿನ ಫೀಲ್ಡಿಂಗ್‌ಗೆ ಮತ್ತೊಂದು ಹೆಸರೇ ಜಾಂಟಿ ರೋಡ್ಸ್! ಯಾವುದೇ ಕ್ರಿಕೆಟ್‌ನಲ್ಲೂ ಆಟಗಾರನೊಬ್ಬ ಅತ್ಯುತ್ತಮ ಕ್ಷೇತ್ರರಕ್ಷಣೆ ಮಾಡಿದಾಗ ಆತನನ್ನು ಜಾಂಟಿ ರೋಡ್ಸ್ ಎಂದೇ ಪ್ರಶಂಸಿಸಲಾಗುತ್ತದೆ. ದಕ್ಷಿಣ ಆಫ್ರಿಕಾ ಪರ 11 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ 2003ರಲ್ಲೇ ಅವರು ನಿವೃತ್ತಿ ಹೊಂದಿದ್ದರೂ, ಅವರಿಗಿಂತ ಅದ್ಭುತ ಫೀಲ್ಡರ್ ಅನ್ನು ಕ್ರಿಕೆಟ್ ಲೋಕ ಇನ್ನೂ ಕಂಡಿಲ್ಲ. ಇತ್ತ ಜಾಂಟಿ ರೋಡ್ಸ್ ಕೂಡ 51ನೇ ವಯಸ್ಸಿನಲ್ಲೂ ಅದೇ ಚುರುಕುತನವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎಂದರೆ ನೀವು ನಂಬಲೇ ಬೇಕು.

    ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಯುಎಇಯಲ್ಲಿರುವ ಜಾಂಟಿ ರೋಡ್ಸ್, ಅಭ್ಯಾಸದ ವೇಳೆ ಚುರುಕಿನ ಕ್ಯಾಚ್ ಹಿಡಿದಿರುವ ವಿಡಿಯೋ ಈಗ ವೈರಲ್ ಆಗಿದೆ. 51ನೇ ವಯಸ್ಸಿನಲ್ಲೂ 21 ವರ್ಷದ ಯುವಕರನ್ನು ನಾಚಿಸುವಂತೆ ಜಾಂಟಿ ರೋಡ್ಸ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಜಾಂಟಿ ರೋಡ್ಸ್ ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋವನ್ನು ಪ್ರಕಟಿಸಿದೆ. ಜತೆಗೆ, ‘ನೀವು ಅದನ್ನು ಕ್ಯಾಚ್ ಮಾಡಿದಿರಾ?’ ಎಂದೂ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಾಂಟಿ ರೋಡ್ಸ್, ‘ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆನಂದಿಸುತ್ತಿದ್ದರೆ ಎಂದಿಗೂ ತೀರಾ ವಯಸ್ಸಾಗದು. 51ನೇ ವಯಸ್ಸಿನಲ್ಲೂ ಹಾರಬಲ್ಲೆ. ಆದರೆ ಲ್ಯಾಂಡಿಂಗ್ ಸ್ವಲ್ಪ ಕಷ್ಟಕರವಾಗಿದೆ’ ಎಂದು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 17 ವರ್ಷಗಳೇ ಕಳೆದರೂ ಜಾಂಟಿ ರೋಡ್ಸ್​ ಫೀಲ್ಡಿಂಗ್​ ಈಗಲೂ ಹೇಗಿದೆ ನೋಡಿ ಎಂದು ಐಸಿಸಿ ಕೂಡ ಈ ವಿಡಿಯೋವನ್ನು ಟ್ವೀಟ್​ ಮಾಡಿದೆ.

    ಇದನ್ನೂ ಓದಿ: ಜಾಂಟಿ ರೋಡ್ಸ್ ಮನಗೆದ್ದ ಭಾರತೀಯ ಫೀಲ್ಡರ್

    ಈ ಹಿಂದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಜಾಂಟಿ ರೋಡ್ಸ್, ಐಪಿಎಲ್ ನಂತರದಲ್ಲಿ ಸ್ವೀಡನ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 1993ರಲ್ಲಿ ಏಕದಿನ ಪಂದ್ಯವೊಂದರಲ್ಲಿ 5 ಕ್ಯಾಚ್ ಹಿಡಿದು ವಿಶ್ವದಾಖಲೆ ಬರೆದಿದ್ದ ಜಾಂಟಿ ರೋಡ್ಸ್, ಕ್ರಿಕೆಟ್ ಮೈದಾನದ 30 ಯಾರ್ಡ್ಸ್ ವೃತ್ತದೊಳಗೆ ಅತ್ಯುತ್ತಮ ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ಕ್ಯಾಚಿಂಗ್ ಮಾತ್ರವಲ್ಲದೆ, ರನೌಟ್ ಮೂಲಕವೂ ಹಲವು ಬ್ಯಾಟ್ಸ್‌ಮನ್‌ಗಳಿಗೆ ಕಂಟಕರಾಗಿದ್ದರು.

    VIDEO | ಜಾಂಟಿ ರೋಡ್ಸ್​ಗೆ ಪೈಪೋಟಿ ನೀಡುವ ಫೀಲ್ಡರ್​ ಪತ್ತೆ ಹಚ್ಚಿದ ಸಚಿನ್​ ತೆಂಡುಲ್ಕರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts