More

    5000% ಲಾಭಾಂಶ ಘೋಷಿಸಿದ ಆಟೋ ಕಂಪನಿ: ಬಂಪರ್​ ಡಿವಿಡೆಂಡ್ ಪ್ರಕಟಿಸಿದ ತಕ್ಷಣವೇ ಷೇರು ಬೆಲೆ ಜಿಗಿತ

    ಮುಂಬೈ: ಆಟೋ ವಲಯದ ದೊಡ್ಡ ಕ್ಯಾಪ್ ಕಂಪನಿಯಾದ ಹಿರೊ ಮೊಟೊಕಾರ್ಪ್​ ಲಿಮಿಟೆಡ್​ (Hero MotoCorp Ltd) ಶುಕ್ರವಾರ, ಫೆ. 9ರಂದು ತ್ರೈಮಾಸಿಕ ಫಲಿತಾಂಶಗಳನ್ನು ಘೋಷಿಸಿತು.

    ಡಿಸೆಂಬರ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭದಲ್ಲಿ 51% ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ.
    ಈ ಹಿನ್ನೆಲೆಯಲ್ಲಿ ಕಂಪನಿಯ ಪ್ರತಿ ಷೇರಿಗೆ ರೂ 75 ರ ಮಧ್ಯಂತರ ಲಾಭಾಂಶ ಮತ್ತು ರೂ 25 ರ ವಿಶೇಷ ಲಾಭಾಂಶ ಸೇರಿ ಒಟ್ಟಾರೆ ಮಧ್ಯಂತರ ಲಾಭಾಂಶವನ್ನು ರೂ 100/- ಷೇರಿಗೆ ಪ್ರಕಟಿಸಲಾಗಿದೆ.

    ಹೀಗಾಗಿ, ಈ ಕಂಪನಿಯ ಷೇರಿನ ಬೆಲೆ ಶುಕ್ರವಾರ 2.15% ರಷ್ಟು ಹೆಚ್ಚಳವಾಗಿ, 4908.85 ರೂಪಾಯಿ ತಲುಪಿತು. ಇಂಟ್ರಾ ಡೇ ವಹಿವಾಟಿನ ನಡುವೆ ಈ ಷೇರುಗಳ ಬೆಲೆ 52 ವಾರಗಳ ಗರಿಷ್ಠ ಮಟ್ಟವಾದ 4924 ರೂಪಾಯಿಗೆ ತಲುಪಿತ್ತು. ಕಳೆದ ಒಂದು ತಿಂಗಳಲ್ಲಿ ಈ ಕಂಪನಿಯ ಷೇರು ಬೆಲೆ 19% ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ 92% ಏರಿಕೆಯಾಗಿದೆ. ಹೀರೋ ಮೋಟೋಕಾರ್ಪ್ ಷೇರುಗಳ 52-ವಾರದ ಗರಿಷ್ಠ ಬೆಲೆಯು ರೂ 4924.05 ಮತ್ತು ಕನಿಷ್ಠ ಬೆಲೆ ರೂ 2246.75 ಇದೆ. ಕಂಪನಿಯು 98,114.61 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಈ ಕಂಪನಿಯ ಷೇರುಗಳ ಬೆಲೆ ಕಳೆದ 3-ತಿಂಗಳಲ್ಲಿ 55% ಮತ್ತು 6-ತಿಂಗಳಲ್ಲಿ 61% ನಷ್ಟು ಏರಿಕೆಯಾಗಿದೆ,

    ಮಧ್ಯಂತರ ಡಿವಿಡೆಂಡ್ 3750%, ಅಂದರೆ ಪ್ರತಿ ಈಕ್ವಿಟಿ ಷೇರುಗಳಿಗೆ ರೂ 75 ಹಾಗೂ ವಿಶೇಷ ಲಾಭಾಂಶ 1250% ಅಂದರೆ ರೂ 25 ಪ್ರತಿ ಈಕ್ವಿಟಿ ಷೇರಿಗೆ ನೀಡಲಾಗುತ್ತದೆ. ಒಟ್ಟಾರೆ ಮಧ್ಯಂತರ ಡಿವಿಡೆಂಡ್ 5000% ಅಂದರೆ 2023-24 ಹಣಕಾಸು ವರ್ಷಕ್ಕೆ ಪ್ರತಿ ಇಕ್ವಿಟಿ ಷೇರಿಗೆ ರೂ. 100 ಆಗಿರುತ್ತದೆ. ಮಧ್ಯಂತರ ಮತ್ತು ವಿಶೇಷ ಲಾಭಾಂಶ ಪಾವತಿಯನ್ನು ಮಾರ್ಚ್ 9 ರೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

    ಡಿಸೆಂಬರ್​ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಒಟ್ಟಾರೆ ಆದಾಯವು 21% ರಷ್ಟು ಹೆಚ್ಚಾಗಿದೆ. ಇದೇ ತ್ರೈಮಾಸಿಕದಲ್ಲಿ ಕಂಪನಿಯು 1,073 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯು ರೂ. 711 ಕೋಟಿ ಲಾಭ ಮಾಡಿತ್ತು. ಅದಕ್ಕೆ ಹೋಲಿಸಿದರೆ ಡಿಸೆಂಬರ್​ ತ್ರೈಮಾಸಿಕದ ಲಾಭ 51% ಬೆಳವಣಿಗೆ ಸಾಧಿಸಿದೆ. ಹೀರೋ ಮೋಟೋಕಾರ್ಪ್ ಲಿಮಿಟೆಡ್ ದ್ವಿಚಕ್ರ ವಾಹನಗಳ ವಿಶ್ವದ ಅತಿದೊಡ್ಡ ತಯಾರಕ ಕಂಪನಿಯಾಗಿದೆ.

    ಟಾಟಾ ಪವರ್ Q3 ಲಾಭ 1076 ಕೋಟಿ ರೂಪಾಯಿ: ಷೇರಿನ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts