More

    17 ದಿನಗಳಲ್ಲಿ ಸಿದ್ಧವಾದ 500 ಬೆಡ್​ಗಳ ಕೋವಿಡ್ ಆಸ್ಪತ್ರೆ : ಡಿಆರ್​ಡಿಒ ಚಮತ್ಕಾರ!

    ಶ್ರೀನಗರ : ಕರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವ ಭಾರತದಲ್ಲಿ ಮೂರನೇ ಅಲೆಯ ಎಚ್ಚರಿಕೆ ನೀಡಲಾಗಿರುವ ಈ ಸಂದರ್ಭದಲ್ಲಿ, ದೇಶದಾದ್ಯಂತ ಆರೋಗ್ಯ ಸೇವೆಯನ್ನು ವಿಸ್ತಾರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹುದೇ ಪ್ರಯತ್ನ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪಿಎಂಕೇರ್ಸ್​ ಫಂಡ್​ನ ಸಹಾಯದಿಂದ ನಡೆದಿದೆ.

    ಶ್ರೀನಗರದ ಖೋನ್​ಮೋಹ್​ನಲ್ಲಿ ಡಿಫೆನ್ಸ್ ರಿಸರ್ಚ್​ ಅಂಡ್​ ಡೆವಲಪ್​ಮೆಂಟ್ ಆರ್ಗನೈಜೇಷನ್(ಡಿಆರ್​​ಡಿಒ) ಹದಿನೇಳೇ ದಿನಗಳಲ್ಲಿ ಸ್ಥಾಪಿಸಿರುವ 500 ಬೆಡ್​ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಗೆ ಇದೀಗ ಚಾಲನೆ ಸಿಕ್ಕಿದೆ. ಕರೊನಾ ರೋಗಿಗಳನ್ನು ಉಚಿತ ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ಆರಂಭಿಸಿರುವ ಈ ಆಸ್ಪತ್ರೆಯಲ್ಲಿ, 125 ವೆಂಟಿಲೇಟರ್​ಸಹಿತ ಐಸಿಯು ಬೆಡ್​ಗಳಿವೆ.

    ಕರೊನಾ ಸೋಂಕಿತ ಮಕ್ಕಳ ಚಿಕಿತ್ಸೆಗೂ ಗಮನ ನೀಡಲಾಗಿದ್ದು, 25 ವೆಂಟಿಲೇಟರ್ ಸಹಿತ ಬೆಡ್​ಗಳ ಪೀಡಿಯಾಟ್ರಿಕ್ ಐಸಿಯು ಸ್ಥಾಪಿಸಲಾಗಿದೆ ಎಂದು ಡಿಆರ್​ಡಿಒ ತಿಳಿಸಿದೆ. (ಏಜೆನ್ಸೀಸ್)

    2022ರ ಪಂಜಾಬ್ ಚುನಾವಣೆಗೆ ಅಕಾಲಿ ದಳ ಮತ್ತು ಬಿಎಸ್​ಪಿ ಜೋಡಿ

    84,332 ಹೊಸ ಕರೊನಾ ಪ್ರಕರಣ; 10.80 ಲಕ್ಷಕ್ಕೆ ಇಳಿದ ಸಕ್ರಿಯ ಸಂಖ್ಯೆ

    ಸಂಬಳ ಹೆಚ್ಚಿಸುತ್ತಿಲ್ಲ, ಮನೆ ಸಂಭಾಳಿಸಲು ಆಗುತ್ತಿಲ್ಲ ಎಂದು ಕಾರ್ಮಿಕ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts