More

    500 ವರ್ಷಗಳ ಇತಿಹಾಸವಿರುವ ಕೆಳದಿ ಅರಸರ ಕಾಲದ ಅರಮನೆ ಗೌರಿ: ಎಲ್ಲ ಸಮುದಾಯದವರಿಗೂ ಮುಟ್ಟಿ ಪೂಜಿಸಲು ಅವಕಾಶ

    ಸಾಗರ: ಕೆಳದಿ ಅರಸರ ಕಾಲದಿಂದಲೂ ಆರಾಧನೆಗೆ ಒಳಪಟ್ಟಿರುವ 500 ವರ್ಷಗಳ ಇತಿಹಾಸವಿರುವ ಅರಮನೆ ಗೌರಿಯನ್ನು ಮಂಗಳವಾರ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
    ಸಾಗರದ ದಿ. ಚಂದ್ರಶೇಖರ ಜೋಯಿಸ್ ಮತ್ತು ದಿ.ಸೂರ್ಯನಾರಾಯಣ ಜೋಯಿಸ್ ಕುಟುಂಬದವರು ವರ್ಷಕ್ಕೆ ಒಬ್ಬರು ಸರದಿಯಂತೆ ಅರಮನೆ ಗೌರಿಯನ್ನು ಕೆಳದಿ ಅರಸರ ಆಳ್ವಿಕೆಯ ನಂತರ ತಮ್ಮ ಮನೆಯಲ್ಲಿಟ್ಟು ಆರಾಧಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ದಿ. ಸೂರ್ಯನಾರಾಯಣ ಜೋಯಿಸ್ ಅವರ ಪುತ್ರ ಲಕ್ಷ್ಮಣ್ ಜೋಯಿಸ್ ಮತ್ತು ಸಹೋದರರು ತಮ್ಮ ಮನೆಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ಸಿಂಹದ ಮೇಲೆ ಕುಳಿತಿರುವ ಅರಮನೆ ಗೌರಿಯನ್ನು ಪ್ರತಿಷ್ಠಾಪಿಸಲಿದ್ದಾರೆ. ಎರಡು ದಿನಗಳ ಕಾಲ ಜನತೆಗೆ ಅರಮನೆ ಗೌರಿಯನ್ನು ಪೂಜಿಸುವ ಅವಕಾಶವಿರುತ್ತದೆ. ಬುಧವಾರ ಗಣಪತಿ ಹಬ್ಬದಂದು ಸಾಗರದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಗಣಪತಿಯೊಂದಿಗೆ ಗೌರಿಯನ್ನು ಕೂಡ ವಿಸರ್ಜಿನೆ ಮಾಡುತ್ತಾರೆ.
    ಅರಮನೆ ಗೌರಿಯ ವಿಶೇಷವೇನೆಂದರೆ ಎಲ್ಲ ಸಮುದಾಯದವರು ಗೌರಿಯನ್ನು ಮುಟ್ಟಿ ಪೂಜಿಸುವ ಸಂಪ್ರದಾಯ ಕೆಳದಿ ಅರಸರ ಕಾಲದಿಂದಲೂ ನಡೆದುಕೊಂಡು ಬಂದಿದೆ, ಅತ್ಯಂತ ವಿಜೃಂಭಣೆಯಿಂದ ಅರಮನೆ ಗೌರಿಯ ಪೂಜೆ ನಡೆಯುತ್ತದೆ. ಹಿಂದೆ ಕೆಳದಿಯ ಅರಮನೆಯಲ್ಲಿ ಗೌರಿಯನ್ನು ಪೂಜಿಸಲು ಜೋಯಿಸರ ಮನೆತನದವರಿಗೆ 11 ವರಹ ನೀಡುತ್ತದ್ದರಂತೆ. ನಂತರ 11 ರೂಪಾಯಿಯನ್ನು ಬ್ರಿಟಿಷ್ ಸರ್ಕಾರ ನೀಡುತ್ತಿತ್ತು. ಈಗ ಸರ್ಕಾರದಿಂದ ಯಾವುದೇ ನೆರವು ಇಲ್ಲದಿದ್ದರೂ ಸಂಪ್ರದಾಯವನ್ನು ಜೋಯಿಸರ ಮನೆತನದವರು, ಮುನ್ನಡೆಸಿಕೊಂಡು ಬರುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts