More

    ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

    ನವದೆಹಲಿ: ಕೋವಿಡ್​-19 ಹಾವಳಿಯನ್ನು ತಡೆಯಲು/ನಿಯಂತ್ರಿಸಲು ಹಾಗೂ ಜನರು ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಾಡಲು ಕೆಲವು ರಾಜ್ಯ/ದೇಶಗಳು ತಮ್ಮದೇ ಆದ ರೀತಿಯಲ್ಲಿ ನಾನಾ ಕ್ರಮಗಳನ್ನು ಜರುಗಿಸುತ್ತಿವೆ. ಅಂತೆಯೇ ಇಲ್ಲೊಂದು ಕಡೆ ಮಾಸ್ಕ್​ ಧರಿಸದಿದ್ದರೆ ಭಾರಿ ದಂಡವನ್ನೇ ತೆರಬೇಕಾಗುತ್ತದೆ ಇಲ್ಲವೇ ದಿನಗಟ್ಟಲೆ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.

    ಅಷ್ಟಕ್ಕೂ ಇಲ್ಲಿ ಪ್ರವಾಸಿಗರನ್ನು ನಿಯಂತ್ರಣದಲ್ಲಿ ಇರಿಸುವ ಸಲುವಾಗಿ ಇಂಥದ್ದೊಂದು ಕಠಿಣಕ್ರಮ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಇಲ್ಲಿ ಪ್ರವಾಸಿಗರು ಕೋವಿಡ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವರ್ತಿಸಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಇತರ ಕಡೆಯಿಂದ ಇಲ್ಲಿಗೆ ಪ್ರವಾಸ ಬರುವವರು ಸಂಯಮದಿಂದ ಇರಲಿ ಎಂದು ಇಲ್ಲಿ ಈ ಭಾರಿ ದಂಡ ವಿಧಿಸಲಾಗುತ್ತಿದೆ.

    ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ.. ಆರು ತಿಂಗಳ ಬಳಿಕ ಆ ದಾಖಲೆ ಸಿಗಲ್ಲ…

    ಅಂದಹಾಗೆ ಇದು ಹಿಮಾಚಲ ಪ್ರದೇಶ ಸರ್ಕಾರ ಕೈಗೊಂಡಿರುವ ಕಠಿಣಕ್ರಮ. ಇಲ್ಲಿನ ಮನಾಲಿಯಲ್ಲಿ ಪ್ರವಾಸಿಗರು ಮಾಸ್ಕ್​ ಧರಿಸದೆ ಇರುವುದು ಕಂಡುಬಂದಲ್ಲಿ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದಕ್ಕೆ ತಪ್ಪಿದಲ್ಲಿ 8 ದಿನಗಳ ಕಾಲ ಜೈಲಿಗೆ ತಳ್ಳಲಾಗುತ್ತದೆ. ಹೀಗೆ ಇಲ್ಲಿ ಇದುವರೆಗೂ ಅಂದರೆ ಕಳೆದ ಏಳೆಂಟು ದಿನಗಳಲ್ಲಿ 3 ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು ಇಲ್ಲಿನ ಕುಲು ಎಸ್​ಪಿ ಗುರುದೇವ್ ಶರ್ಮಾ ತಿಳಿಸಿದ್ದಾರೆ. ಕುಲು, ಮನಾಲಿ, ಶಿಮ್ಲಾದಲ್ಲಿ ಕೋವಿಡ್ ನಿಯಮ ಉಲ್ಲಂಘಿಸುವ ಪ್ರವಾಸಿಗರನ್ನು ಹೀಗೆ ನಿಯಂತ್ರಿಸುವ ಜತೆಗೆ ನಿಯಮ ಉಲ್ಲಂಘಿಸದಂತೆ ತಡೆಯಲಾಗುತ್ತಿದೆ. (ಏಜೆನ್ಸೀಸ್)

    ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂದ್ರು 281 ವೈದ್ಯರು!; ಯಾಕೆ, ಯಾರಲ್ಲಿ?

    ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

    ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts