More

    ಮನೆಗೆ ಬರುತ್ತೇ ಫೈವ್ ಸ್ಟಾರ್​ ಹೋಟೆಲ್​ ಊಟ; ಬಟ್ಟೆನೂ ತೊಳೆದು ಕೊಡ್ತಾರೆ…!

    ನವದೆಹಲಿ: ಕರೊನಾದಿಂದ ಭಾರಿ ಕಂಗೆಟ್ಟಿರುವ ಕ್ಷೇತ್ರವೆಂದರೆ ಹೋಟೆಲ್​ ಉದ್ಯಮ. ಜನ ಮನೆಯಿಂದಲೇ ಹೊರಗೆ ಬರಬೇಡಿ ಎಂದ ಮೇಲೆ ಊರಿಂದ ಊರಿಗೆ ಹೋಗಿ ಹೋಟೆಲ್​ಗಳಲ್ಲಿ ಉಳಿದುಕೊಳ್ಳೋದಾದರೂ ಯಾರು? ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುವರೆಗೆ ಹೋಟೆಲ್​ ಉದ್ಯಮ ಕ್ಷೇತ್ರ ಚೇತರಿಸಿಕೊಳ್ಳುವುದು ಅನುಮಾನ.

    ಕೆಲ ಹೋಟೆಲ್​ಗಳನ್ನು ಕೋವಿಡ್​ ರೋಗಿಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಎಷ್ಟು ದಿನಗಳವರೆಗೆ ಹೋಟೆಲ್​ಗಳನ್ನು ಬಂದ್ ಮಾಡಿಕೊಂಡಿರುವುದು ಎಂದುಕೊಂಡು ತೆರೆದ ಮಾಲೀಕರು, ಜನರೇ ಬಾರದಿರುವುದರಿಮದ ಕಂಗಾಲಾಗಿದ್ದಾರೆ.

    ಇದನ್ನೂ ಓದಿ; ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು

    ಹೀಗಾಗಿ ಕೆಲ ಫೈವ್​ಸ್ಟಾರ್​ ಹೋಟೆಲ್​ಗಳು ಹೊಸ ತಂತ್ರ ಅನುಸರಿಸುತ್ತಿವೆ. ಜೈಪುರ್​ನಲ್ಲಿ ಈ ಐಷಾರಾಮಿ ಹೋಟೆಲ್​ಗಳು ಗ್ರಾಹಕರ ಮನೆಗೆ ಊಟವನ್ನು ಕಳುಹಿಸುತ್ತಿವೆ. ಅದು ಕೂಡ ಶೇ.50 ಡಿಸ್ಕೌಂಟ್​ನಲ್ಲಿ ಎಂದು ಪ್ರಚಾರ ಮಾಡುತ್ತಿವೆ.

    ಐಷಾರಾಮಿ ಕಾರಿನಲ್ಲಿ, ಬಾಣಸಿಗ ಜತೆಗೇ ಊಟವನ್ನು ಕಳುಹಿಸಲಾಗುತ್ತದೆ ಎಂದು ಹೋಟೆಲ್​ ಅಧಿಕಾರಿಗಳು ಹೇಳುತ್ತಾರೆ. ಇದು ಗ್ರಾಹಕರ ಅಭಿರುಚಿಯನ್ನು ಅರಿಯುವ ಪ್ರಯತ್ನ ಎನ್ನುತ್ತಾರೆ.

    ಇದನ್ನೂ ಓದಿ; ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ

    ಭಾರಿ ದುಬಾರಿ ಎಂದುಕೊಂಡು ಪಂಚತಾರಾ ಹೋಟೆಲ್​ಗೆ ಹೋಗದವರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂಬುದು ಹೋಟೆಲ್​ನವರ ವಾದ. ಹಾಲಿಡೇ ಇನ್​, ಕ್ಲಾರ್ಕ್ಸ್​ ಅಮೇರ್​ ಹೋಟೆಲ್​ ಸೇರಿ ಹಲವು ಫೈವ್​ ಸ್ಟಾರ್​ ಹೋಟೆಲ್​ಗಳು ಇಂಥ ಸೇವೆಗಳನ್ನು ಒದಗಿಸುತ್ತಿವೆ. ಇಷ್ಟೇ ಅಲ್ಲದೇ, ಮನೆ ಬಾಗಿಲಿಗೆ ಲಾಂಡ್ರಿ ಸೇವೆಯನ್ನು ನೀಡುತ್ತಿವೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts