More

    ಜಡ್ಜ್​ ಮನೆಯಿಂದ ಕಳ್ಳರು ದೋಚಿದ ವಸ್ತುವನ್ನು ಕೇಳಿ ಪೊಲೀಸರೇ ಶಾಕ್​…!

    ಭೋಪಾಲ್​: ಕಾಂಪೌಡ್​ ಏರಿ ಮಧ್ಯಪ್ರದೇಶ ನ್ಯಾಯಾಧೀಶರ ಅಧಿಕೃತ ನಿವಾಸದ ಮನೆಯಂಗಳ ಪ್ರವೇಶಿಸಿದ ಕಳ್ಳರು ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆಂಬ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶಾಕ್​ ಆಗುವಂತಹ ವಿಚಾರವೊಂದು ತಿಳಿದಿದೆ.

    ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್​ರನ್ನು ಬಾಂಬ್​ ಸ್ಪೋಟಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ರಾಜಧಾನಿ ಭೋಪಾಲ್​ನಿಂದ 560 ಕಿ.ಮೀ. ದೂರದಲ್ಲಿರುವ ಸಿಧಿ ಏರಿಯಾದಲ್ಲಿರುವ ಜ್ಯುಡಿಶಿಯಲ್​ ಮ್ಯಾಜಿಸ್ಟ್ರೇಟ್​ ವಿವೇಕ್​ ಕುಮಾರ್​ ಸಿಂಗ್​ ಅವರ ಅಧಿಕೃತ ನಿವಾಸಕ್ಕೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಕಳ್ಳರು ಪ್ರವೇಶ ನೀಡಿದ್ದರು.

    ಕಾಂಪೌಂಡ್​ ಏರಿ ಮನೆಯಂಗಳ ಪ್ರವೇಶಿಸಿದ ಕಳ್ಳರು ಬಳಿಕ ಶೌಚಗೃಹದ ವೆಂಟಿಲೇಟರ್​ ಕತ್ತರಿಸಿ ಮನೆಗೆ ನುಗ್ಗಿದ್ದಾರೆ. ಆದರೆ, ಅಚ್ಚರಿಯ ವಿಚಾರವೆಂದರೆ ಕಳ್ಳರು ಯಾವುದೇ ಬೆಲೆ ಬಾಳುವ ವಸ್ತುಗಳಿಗೆ ಕೈಹಾಕದೇ, ಕೇವಲ 5 ಚಪಾತಿ ಮತ್ತು ಜಡ್ಜ್​ ಪ್ಯಾಂಟಿನ ಜೇಬಿನಲ್ಲಿದ್ದ 1900 ರೂ. ಅನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಇದೇ ವಿಚಾರ ಸಿಧಿಯಲ್ಲಿ ಚರ್ಚಾ ವಿಷಯವಾಗಿದೆ.

    ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಶ್ವಾನದಳ ಸಹಾಯದೊಂದಿಗೆ ಕಳ್ಳರಿಗೆ ಬಲೆ ಬೀಸಿದ್ದಾರೆ. ಕರೊನಾ ವೈರಸ್​ನಿಂದ ರಾಷ್ಟ್ರವ್ಯಾಪಿ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಉದ್ಯೋಗವಿಲ್ಲದೇ, ಹಸಿವು ತೀರಿಸಿಕೊಳ್ಳಲು ಸ್ಥಳೀಯರೇ ಒಟ್ಟುಗೂಡಿ ಹೀಗೆ ಮಾಡಿದ್ದಾರೆಂಬ ಚರ್ಚೆಯು ನಡೆಯುತ್ತಿದೆ. (ಏಜೆನ್ಸೀಸ್​)

    ನನ್ನ ತಲೆ ಕತ್ತರಿಸಿ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts