More

    ಏರ್​ ಇಂಡಿಯಾದ ಐವರು ಪೈಲಟ್​ಗಳಲ್ಲಿ ಕರೊನಾ ಸೋಂಕು; ಚೀನಾವೇ ಮೂಲ…!

    ನವದೆಹಲಿ: ಏರ್​ ಇಂಡಿಯಾದ ಐವರು ಪೈಲಟ್​​ಗಳಿಗೆ ಕರೊನಾ ವೈರಸ್​ ತಗುಲಿದ್ದು ದೃಢಪಟ್ಟಿದೆ.
    ಆದರೆ ಪೈಲಟ್​ಗಳಲ್ಲಿ ಕೊವಿಡ್​ನ ಯಾವುದೇ ಲಕ್ಷಣಗಳೂ ಕಂಡುಬಂದಿರಲಿಲ್ಲ. ವಿಮಾನ ಕಾರ್ಯಾಚರಣೆ ಕರ್ತವ್ಯಕ್ಕೆ ಹೋಗುವ 72 ಗಂಟೆಗಳ ಮೊದಲು ಅವರನ್ನು ವಾಡಿಕೆಯಂತೆ ತಪಾಸಣೆಗೆ ಒಳಪಡಿಸಲಾಗಿತ್ತು. ಒಟ್ಟು 77 ಪೈಲಟ್​​ಗಳ ಗಂಟಲಿನ ಮಾದರಿಯನ್ನು ಕಳಿಸಲಾಗಿತ್ತು. ಅವರಲ್ಲೀಗ ಐವರಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಅವರಿಗೆ ಹೋಂ ಕ್ವಾರಂಟೈನ್​ನಲ್ಲಿ ಇರಲು ಸೂಚಿಸಲಾಗಿದೆ.

    ಹಾಗೇ ಓರ್ವ ಇಂಜಿನಿಯರ್​ ಮತ್ತು ಟೆಕ್ನಿಷಿಯನ್​ಗೆ ಕೂಡ ಕರೊನಾ ತಗುಲಿದೆ. ಐವರು ಸೋಂಕಿರ ಪೈಲಟ್​​ಗಳು ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಏ.20ರಂದು ಕೊನೇ ಬಾರಿಗೆ ಹಾರಾಟ ನಡೆಸಿದ್ದಾರೆ.

    ಏರ್​ ಇಂಡಿಯಾ ವಿಮಾನಗಳು ಲಾಕ್​ಡೌನ್​ ಸಂದರ್ಭದಲ್ಲಿ ಸತತವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೊವಿಡ್​ -19 ಪ್ರಾರಂಭದಲ್ಲಿ ಬೇರೆ ದೇಶಗಳಲ್ಲಿ ಇರುವ ಭಾರತೀಯರನ್ನು ನಮ್ಮ ದೇಶಕ್ಕೆ ಕರೆದುಕೊಂಡು ಬಂದಿವೆ. ಸದ್ಯ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆದುಕೊಂಡು ಬರುವ ಕೆಲಸವನ್ನೂ ಮಾಡುತ್ತಿವೆ. ಈ ಮಧ್ಯೆ ಭಾರತದಲ್ಲಿ ಸಿಲುಕಿದ್ದ ವಿವಿಧ ದೇಶಗಳ ಪ್ರಜೆಗಳನ್ನು ಅವರ ರಾಷ್ಟ್ರಕ್ಕೆ ತಲುಪಿಸಿವೆ.

    ಈಗ ಸೋಂಕಿಗೆ ಒಳಗಾಗಿರುವ ಪೈಲಟ್​ಗಳು ಏ.20ರನಂತರ ಯಾವುದೇ ವಿಮಾನದಲ್ಲಿ ಕಾರ್ಯ ನಿರ್ವಹಿಸಿಲ್ಲ. ಅದಕ್ಕೂ ಮೊದಲು ಚೀನಾಕ್ಕೆ ಹೋಗಿಬಂದವರಾಗಿದ್ದರು ಎಂದು ಏರ್​ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಉದ್ಯೋಗಾಧಾರಿತ ವೀಸಾ ತಾತ್ಕಾಲಿಕ ನಿಷೇಧ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧತೆ; ಭಾರತೀಯರು ಸಹಿತ ಲಕ್ಷಾಂತರ ಜನರಿಗೆ ಸಮಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts