More

    5ನೇ ದಿನಕ್ಕೆ ಮುಂದುವರಿದ ರೈತರ ಪ್ರತಿಭಟನೆ

    ರಟ್ಟಿಹಳ್ಳಿ: ಶಿಕಾರಿಪುರ ತಾಲೂಕಿನ ಉಡುಗಣಿ-ಹೊಸುರು-ತಾಳಗುಂಡ ಯೋಜನೆಗೆ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧಿಸಿ ಚಟ್ನಳ್ಳಿ ಗ್ರಾಮದ ಬಳಿ ನ. 30ರಿಂದ ಆರಂಭವಾದ ಪ್ರತಿಭಟನೆಯು ಗುರುವಾರ 4ನೇ ದಿನ ಪೂರೈಸಿತು. ಸರ್ಕಾರ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಹಿರಿಯ ವಕೀಲ ಬಿ.ಡಿ. ಹಿರೇಮಠ ಹೇಳಿದರು.

    ‘ಚಟ್ನಳ್ಳಿ ಬಳಿ ರೈತರ ಪ್ರತಿಭಟನೆ ಕಳೆದ 4 ದಿವಸಗಳಿಂದ ನಡೆಯುತ್ತಿದೆ. ಪ್ರಸ್ತುತ ರಟ್ಟಿಹಳ್ಳಿ ಪಟ್ಟಣದ ಭಗತ್​ಸಿಂಗ್ ವೃತ್ತದಲ್ಲಿ ರೈತರೊಂದಿಗೆ ಶಾಂತಿಯುತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ಸರ್ಕಾರ ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ 150 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. ಕಳೆದ 10 ತಿಂಗಳ ಹಿಂದೆಯೇ 52 ಕೋಟಿ ರೂ. ಮಂಜೂರಾಗಿದ್ದು ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಪರಿಹಾರದ ಹಣ ವಿತರಣೆಯಾಗಿಲ್ಲ. 8 ದಿನಗಳೊಳಗೆ ಅಧಿಕಾರಿಗಳು ರೈತರಿಗೆ ಹಣ ವಿತರಣೆ ಮಾಡಬೇಕು. ಶಿಕಾರಿಪುರದ ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸಬೇಕು ಅಲ್ಲಿಯವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ವಕೀಲ ಹಿರೇಮಠ ಹೇಳಿದರು.

    ರೈತ ಮುಖಂಡರಾದ ವಿನಯ ಪಾಟೀಲ, ಉಜಿನೆಪ್ಪ ಕೋಡಿಹಳ್ಳಿ ಮಾತನಾಡಿ, ಡಿ. 2ರಂದು ಹಾವೇರಿಯಲ್ಲಿ ವಕೀಲರು, ರೈತರ ನಿಯೋಗದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ರೈತರಿಗೆ ಕೆಲವು ದಿವಸಗಳಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಭರವಸೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts