More

    2030ರ ವೇಳೆಗೆ ಶಿಕ್ಷಕ ವೃತ್ತಿಯ ಕನಿಷ್ಠ ಶೈಕ್ಷಣಿಕ ಅರ್ಹತೆ ಬದಲು: ಹೊಸ ಅರ್ಹತೆ ಏನು?

    ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯ ರೂಪ ಬದಲಾಗಲಿದ್ದು, 2030ರ ವೇಳೆಗೆ ಶಿಕ್ಷಕ ವೃತ್ತಿಯ ಕನಿಷ್ಠ ಶೈಕ್ಷಣಿಕ ಅರ್ಹತೆಯ ಮಾನದಂಡವೂ ಪರಿಷ್ಕರಿಸಲ್ಪಡಲಿದೆ. ಅಲ್ಲದೆ, ಕಳಪೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮವೂ ಖಾತರಿಯಾಗಲಿದೆ. ಇವೆಲ್ಲ ಹೊಸ ಶಿಕ್ಷಣ ನೀತಿಯಲ್ಲಿರುವ ಪ್ರಮುಖ ಅಂಶಗಳು.

    ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಚೌಕಟ್ಟು ರೂಪಿಸುವಂತೆ ಇರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸಚಿವ ಸಂಪುಟ ನಿನ್ನೆ ಅಂಗೀಕರಿಸಿದೆ. ಅದರಲ್ಲಿ ನೀತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಶಿಕ್ಷಕರ ತರಬೇತಿ ಬೇಡಿಕೆ ಈಡೇರಿಸುವುದಕ್ಕೂ ಮಾರ್ಗದರ್ಶಿ ಸೂತ್ರವನ್ನು ವಿವರಿಸಲಾಗಿದೆ. ಇದರಂತೆ, 2030ರ ವೇಳೆಗೆ ಶಿಕ್ಷಕ ವೃತ್ತಿಯ ಕನಿಷ್ಠ ಶೈಕ್ಷಣಿಕ ಅರ್ಹತೆ 4 ವರ್ಷದ ಬಿಎಡ್ ಪದವಿ ಕಡ್ಡಾಯ ಮಾನದಂಡವಾಗಿರಲಿದೆ.

    ದೇಶಾದ್ಯಂತ ಎಲ್ಲರಿಗೂ ಅನ್ವಯವಾಗುವ ನ್ಯಾಷನಲ್ ಪ್ರೊಫೆಷನಲ್​ ಸ್ಟ್ಯಾಂಡರ್ಡ್ಸ್ ಫಾರ್ ಟೀಚರ್ಸ್​ (ಎನ್​ಪಿಎಸ್​ಟಿ) ಅನ್ನು 2022ರ ಒಳಗೆ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್​ ಅಭಿವೃದ್ಧಿಪಡಿಸಲಿದೆ. ಇದಕ್ಕೆ ಪೂರ್ವಭಾವಿಯಾಗಿ ದೇಶದ ಎನ್​ಸಿಇಆರ್​ಟಿ, ಎಸ್​ಸಿಇಆರ್​ಟಿಗಳು, ಶಿಕ್ಷಕರು ಮತ್ತು ಪರಿಣತರ ಸಂಘಟನೆಗಳೊಂದಿಗೆ ಸಮಾಲೋಚನೆಯೂ ನಡೆಯಲಿದೆ. ಆಯಾ ಹಂತದ ತರಗತಿಗಳ ಶಿಕ್ಷಕರಿಗೆ ಇರಬೇಕಾದ ಪರಿಣತಿ, ಸ್ಪರ್ಧಾತ್ಮಕ ಕೌಶಲಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದನ್ನು ಒಳಗೊಂಡಂತೆ ಗುಣಮಟ್ಟದ ಮಾನದಂಡ ರೂಪಿಸಲ್ಪಡಲಿದೆ. ಪ್ರತಿ 10 ವರ್ಷಕ್ಕೊಮ್ಮೆ ಈ ನೀತಿಯ ಪರಾಮರ್ಶೆ ಮತ್ತು ಪರಿಷ್ಕರಣೆ ನಡೆಯಲಿದೆ.

    ಇದನ್ನೂ ಓದಿ: ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ

    2021ರ ವೇಳೆಗೆ ಹೊಸ ಮತ್ತು ಸಮಗ್ರ ನ್ಯಾಷನಲ್ ಕ್ಯುರಿಕುಲಂ ಫ್ರೇಮ್ ವರ್ಕ್​ ಫಾರ್ ಟೀಚರ್ಸ್ ಎಜುಕೇಶನ್ ಸಿದ್ಧವಾಗಲಿದೆ. ಇದನ್ನು ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಎಜುಕೇಶನ್​(ಎನ್​ಸಿಟಿಇ) ಎನ್​ಸಿಇಆರ್​ಟಿ ಸಹಯೋಗದಲ್ಲಿ ಸಿದ್ಧಪಡಿಸಲಿದೆ. ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲೂ ಪಾರದರ್ಶಕ ವ್ಯವಸ್ಥೆ ತರುವ ಪ್ರಯತ್ನ ಈ ನೀತಿಯಲ್ಲಿದೆ. ಅವರ ಬಡ್ತಿಯನ್ನೂ ಪ್ರತಿಭೆ ಆಧಾರಿತವಾಗಿ ಆಗಬೇಕು ಎಂಬ ಅಂಶವಿದೆ. ಶಿಕ್ಷಕರ ಹಂತದಿಂದ ಶಿಕ್ಷಣ ಆಡಳಿತ ಅಥವಾ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾಗುವ ತನಕದ ಬಡ್ತಿಯ ಹಂತಗಳನ್ನೂ ವಿವರಿಸಲಾಗಿದೆ.

    ಐದನೇ ತರಗತಿ ತನಕ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಶಿಕ್ಷಣವನ್ನು ಶಿಫಾರಸು ಮಾಡಿರುವ ಹೊಸ ಶಿಕ್ಷಣ ನೀತಿ, ಈಗಿರುವ 10+2 ಶಿಕ್ಷಣ ವ್ಯವಸ್ಥೆಯನ್ನು 5+3+3_4ರ ವ್ಯವಸ್ಥೆ ಮರುವಿನ್ಯಾಸಗೊಳಿಸುವುದನ್ನು ಶಿಫಾರಸು ಮಾಡಿದೆ. ಇದಕ್ಕೆ ವಯೋಮಾನವನ್ನೂ ನಿಗದಿಪಡಿಸಿದೆ. ಈ ಹೊಸ ಶಿಕ್ಷಣ ನೀತಿ ಅಂಗೀಕಾರಗೊಂಡರೆ 1986ರಿಂದ ಚಾಲ್ತಿಯಲ್ಲಿರುವ 34 ವರ್ಷ ಹಳೆಯ ರಾಷ್ಟ್ರೀಯ ಶಿಕ್ಷಣ ನೀತಿ ಅಸ್ತಿತ್ವ ಕಳೆದುಕೊಳ್ಳಲಿದೆ. (ಏಜೆನ್ಸೀಸ್)

    ಬೆಂಗಳೂರಿನಲ್ಲಿ ಭಾರತೀಯ ಸೇನಾ ಸೋಲ್ಜರ್ ಜನರಲ್ ಡ್ಯೂಟಿ ನೇಮಕಾತಿ ರ್ಯಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts