More

    ವೆಂಟಿಲೇಟರ್ ಸಿಗದೆ ಮತ್ತೊಂದು ಸಾವು; ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ನಾಲ್ವರ ಮರಣ!

    ಗದಗ: ಗದಗ ಜಿಲ್ಲೆಯ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರುಗಟ್ಟಿಸುವ ವಾತಾವರಣ ಮುಂದುವರಿದಿದ್ದು, ವೆಂಟಿಲೇಟರ್ ಸಿಗದೆ ಒಂದೇ ದಿನದಲ್ಲಿ ಒಟ್ಟು ನಾಲ್ವರು ಕರೊನಾ ಸೋಂಕಿತರು ಮೃತಪಟ್ಟಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಂಟಿಲೇಟರ್, ಆಕ್ಸಿಜನ್, ಬೆಡ್​ಗಳ ಕೊರತೆ ಹೆಚ್ಚಾಗಿದ್ದು, ಸರಿಯಾದ ಸಮಯಕ್ಕೆ ಬೇಕಾದಷ್ಟು ಸವಲತ್ತುಗಳು ಸಿಗದೆ ರೋಗಿಗಳು ಸಾವಿಗೀಡಾಗುವಂತಾಗಿದೆ. ಅಂಥದ್ದೇ ಪರಿಸ್ಥಿತಿ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲೂ ಇದ್ದು, ವೆಂಟಿಲೇಟರ್ ಇಲ್ಲ ಎಂಬ ಕಾರಣಕ್ಕೆ ಇವತ್ತೊಂದೇ ದಿನ ನಾಲ್ಕು ಜನರು ಅನ್ಯಾಯವಾಗಿ ಸಾಯುವಂತಾಗಿದೆ.

    ಇದನ್ನೂ ಓದಿ: ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

    ಕರೊನಾ ಸೋಂಕಿಗೆ ಒಳಗಾಗಿರುವವರ ಪೈಕಿ ಈ ಆಸ್ಪತ್ರೆಯಲ್ಲಿ ಇವತ್ತು ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ವೆಂಟಿಲೇಟರ್ ಸಿಗದೆ ಮೃತಪಟ್ಟಿದ್ದು, ಇದೀಗ ಮತ್ತೊಬ್ಬ ಮಹಿಳೆ ಕೂಡ ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ 65 ವರ್ಷದ ಮಹಿಳೆಯೊಬ್ಬರು ಈ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಪೋಷಕರು ಹಾಗೂ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ವೆಂಟಿಲೇಟರ್ ವ್ಯವಸ್ಥೆ ಆಗಿರಲಿಲ್ಲ. ಇಲ್ಲಿ ವೆಂಟಿಲೇಟರ್ ಬೆಡ್​ಗಳೆಲ್ಲ ಭರ್ತಿಯಾಗಿದ್ದು, ಇವರಿಗೆ ವೆಂಟಿಲೇಟರ್ ಬೆಡ್ ಸಿಗದೆ ಮೃತಪಟ್ಟಿದ್ದಾರೆ.

    ವೆಂಟಿಲೇಟರ್​ ಸಿಗದೆ ಆಸ್ಪತ್ರೆಯೊಳಗೇ ಮೂವರು ಕರೊನಾ ಸೋಂಕಿತರ ಸಾವು

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts