ವೆಂಟಿಲೇಟರ್​ ಸಿಗದೆ ಆಸ್ಪತ್ರೆಯೊಳಗೇ ಮೂವರು ಕರೊನಾ ಸೋಂಕಿತರ ಸಾವು

ಗದಗ: ವೆಂಟಿಲೇಟರ್​ ಸಿಗದೆ ಕರೊನಾ ಸೋಂಕಿತ ಸಾವಿನ ಸರಣಿ ಮುಂದುವರಿದಿದೆ. ಇಂದು(ಸೋಮವಾರ) ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ‌ ಮೂವರು ಸತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಮುಂಡರಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ‌ ಕರೊನಾ ಸೋಂಕಿತರ ಪೈಕಿ ನಾಲ್ವರಿಗೆ ವೆಂಟಿಲೇಟರ್ ಬೆಡ್​ಗಳ ಅವಶ್ಯಕತೆ ಇದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದರು. ಆದರೆ, ಗದಗ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯಲ್ಲಿ ಇರುವ ವೆಂಟಿಲೇಟರ್ ಬೆಡ್​ಗಳು ಭರ್ತಿಯಾಗಿದ್ದರಿಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೆ … Continue reading ವೆಂಟಿಲೇಟರ್​ ಸಿಗದೆ ಆಸ್ಪತ್ರೆಯೊಳಗೇ ಮೂವರು ಕರೊನಾ ಸೋಂಕಿತರ ಸಾವು