More

    4 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಪರಾರಿ – ಅಕ್ಕಿಗಿರಣಿ, ಉಗ್ರಾಣಗಳನ್ನು ಸೀಜ್ ಮಾಡಿದ ಅಧಿಕಾರಿಗಳು

    ಸಿರಗುಪ್ಪ: ರೈತರಿಗೆ ನಾಲ್ಕು ಕೋಟಿ ರೂ. ವಂಚಿಸಿರುವ ನಗರದ ವಿಜಯಲಕ್ಷ್ಮಿ ಅಕ್ಕಿಗಿರಣಿ ಮಾಲೀಕ ಲಕ್ಷ್ಮಿಪತಿ ಅಲಿಯಾಸ್ ಲಕ್ಷ್ಮಿಪುತ್ರ ಶೆಟ್ಟಿ ಈಗ ತಲೆಮರೆಸಿಕೊಂಡಿದ್ದು, ಫೆ.17ರಂದು ಪ್ರಕರಣ ದಾಖಲಾಗಿದೆ.

    ವಂಚನೆಗೊಳಗಾದ ತೆಕ್ಕಲಕೋಟೆ ರೈತರು ಫೆ.13 ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಮಗಾದ ಅನ್ಯಾಯದ ಬಗ್ಗೆ ಅವಲತ್ತುಕೊಂಡಿದ್ದರು. ನಂತರ ರೈತರ ಪರ ನಾಗರಿಕ ಮತ್ತು ಆಹಾರ ಇಲಾಖೆ ಶಿರಸ್ತೇದಾರ್ ಟಿ.ಮಹೇಶ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅಕ್ಕಿಗಿರಣಿ ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ. ವಿಜಯಲಕ್ಷ್ಮಿ ಅಕ್ಕಿಗಿರಣಿಗೆ ಸೋಮವಾರ ಭೇಟಿ ನೀಡಿದ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಡಾ.ರಾಮೇಶ್ವರಪ್ಪ, ಅಕ್ಕಿಗಿರಣಿ ಆವರಣ, ಉಗ್ರಾಣಗಳನ್ನು ಸೀಜ್ ಮಾಡಿ, ನ್ಯಾಯಾಲಯ ಮತ್ತು ಡಿಸಿಗೆ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.

    ತಾಲೂಕು ಸೇರಿದಂತೆ ಸಿಂಧನೂರು, ಕಂಪ್ಲಿ, ಬಳ್ಳಾರಿ ಭಾಗಗಳ 55ಕ್ಕೂ ಹೆಚ್ಚು ರೈತರಿಂದ ಸುಮಾರು ನಾಲ್ಕು ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಪರಾರಿಯಾಗಿದ್ದಾರೆ ಎಂದು ಮೋಸ ಮತ್ತು ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts