More

    3ನೇ ಅಲೆ ಬರುತ್ತಿದೆ… ಮೈಮರೆತು ಜನಜಾತ್ರೆ ಮಾಡಬೇಡಿ: ಐಎಂಎ ಎಚ್ಚರಿಕೆ

    ನವದೆಹಲಿ : ದೇಶದ ವಿವಿಧೆಡೆ ಕರೊನಾ ಲಾಕ್​ಡೌನ್​ಗಳು ಸಡಿಲಗೊಂಡಂತೆ ಆಡಳಿತಗಳು ಮತ್ತು ಜನರು ಮೈಮರೆತು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಭಾರತೀಯ ವೈದ್ಯರ ಸಂಘ(ಐಎಂಎ)ವು ಕಳವಳ ವ್ಯಕ್ತಪಡಿಸಿದೆ. ಕರೊನಾ ಮೂರನೇ ಅಲೆಯು ಇನ್ನೇನು ಅಪ್ಪಳಿಸಲಿದ್ದು, ನಮ್ಮ ಜಾಗರೂಕತೆಯನ್ನು ಬಿಟ್ಟು ನಡೆದುಕೊಳ್ಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮನವಿ ಮಾಡಿದೆ.

    ಐಎಂಎ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಭಾರತವು ದುರಂತವುಂಟುಮಾಡಿದ ಎರಡನೇ ಅಲೆಯಿಂದ ಇತ್ತೀಚೆಗಷ್ಟೇ ಭಾರತ ಸಾವರಿಸಿಕೊಂಡಿದೆ. ಇದಕ್ಕಾಗಿ ಆಧುನಿಕ ವೈದ್ಯಕೀಯ ಸೌಲಭ್ಯ ಮತ್ತು ರಾಜಕೀಯ ನಾಯಕತ್ವಕ್ಕೆ ಆಭಾರಿಯಾಗಿರಬೇಕು. ಆದರೆ, ಮೂರನೇ ಅಲೆಯು ಖಡಾಖಂಡಿತವಾಗಿ ಸಂಭವಿಸುವುದರಿಂದ ಮೈಮರೆತು ನಡೆದುಕೊಳ್ಳುವುದು ಸಮಂಜಸವಲ್ಲ ಎಂದು ಎಚ್ಚರಿಸಿದೆ.

    ಇದನ್ನೂ ಓದಿ: ಈ ವಾರ ಪ್ರಕಟವಾಗಲ್ಲ ಸಿಬಿಎಸ್​ಇ ರಿಸಲ್ಟ್​; ಅಂಕ ಸಲ್ಲಿಕೆಯಲ್ಲಿ ಶಾಲೆಗಳ ವಿಳಂಬ

    “ಜಾಗತಿಕ ಪುರಾವೆಗಳನ್ನು ಮತ್ತು ಮಹಾಮಾರಿಗಳ ಇತಿಹಾಸವನ್ನು ಆಧರಿಸಿದರೆ, ಮೂರನೇ ಅಲೆಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ಸದ್ಯಕ್ಕೇ ಅದು ಸಂಭವಿಸುತ್ತದೆ…. ಆದರೆ ದೇಶದ ಹಲವು ಭಾಗಗಳಲ್ಲಿ ಸರ್ಕಾರ ಮತ್ತು ಜನತೆ ಇಬ್ಬರೂ ನಿರ್ಲಕ್ಷ್ಯದಿಂದ ನಡೆದುಕೊಂಡು, ಕೋವಿಡ್​ ಪ್ರೋಟೋಕಾಲ್​ಗಳನ್ನೂ ಪಾಲಿಸದೆ, ಜನಜಂಗುಳಿ ಉಂಟುಮಾಡುವ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದನ್ನು ನೋಡಿದರೆ ದುಃಖವುಂಟಾಗುತ್ತದೆ” ಎಂದು ಐಎಂಎ ಹೇಳಿದೆ.

    “ಟೂರಿಸ್ಟ್​ ಬೊನಾನ್ಜಾ, ತೀರ್ಥ ಯಾತ್ರೆ, ಧಾರ್ಮಿಕ ಆಚರಣೆಗಳೆಲ್ಲಾ ಅಗತ್ಯವಾದವು. ಆದರೆ ಅವು ಇನ್ನೂ ಕೆಲವು ತಿಂಗಳವರೆಗೆ ಕಾಯಬಹುದು. ಇವೆಲ್ಲವನ್ನೂ ತೆರೆದು, ಲಸಿಕೆ ಹಾಕಿಸಿಕೊಂಡಿಲ್ಲದ ಜನರನ್ನು ಜನಜಂಗುಳಿ ಉಂಟುಮಾಡಲು ಬಿಟ್ಟರೆ, ಅವರು ಕರೊನಾ ಮೂರನೇ ಅಲೆಗೆ ಸೂಪರ್​ ಸ್ಪ್ರೆಡರ್​ಗಳಾಗುತ್ತಾರೆ” ಎಂದು ಐಎಂಎ ಎಚ್ಚರಿಸಿದೆ.

    ಇದನ್ನೂ ಓದಿ: ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​

    ಒಬ್ಬ ಕೋವಿಡ್​ ರೋಗಿಯನ್ನು ಉಪಚರಿಸುವ ವೆಚ್ಚ ಮತ್ತು ಪ್ರಭಾವವು ಈ ರೀತಿಯ ಜನಜಂಗುಳಿಗೆ ಅವಕಾಶ ಕೊಡದಿರುವುದರಿಂದ ಆಗುವ ಆರ್ಥಿಕ ನಷ್ಟಕ್ಕಿಂತ ದೊಡ್ಡದು. ಕಳೆದ ಒಂದೂವರೆ ವರ್ಷದ ಅನುಭವದಿಂದ ಎಲ್ಲರಿಗೂ ಲಸಿಕೆ ನೀಡುವ ಮತ್ತು ಕೋವಿಡ್ ಸೂಕ್ತ ನಡವಳಿಕೆ ಪಾಲಿಸುವ ಮೂಲಕ ಮಾತ್ರ ಮೂರನೇ ಅಲೆಯ ಪ್ರಭಾವವನ್ನು ಕಡಿಮೆ ಮಾಡಲು ಸಾಧ್ಯ ಎಂದು ಐಎಂಎ ಹೇಳಿದೆ. (ಏಜೆನ್ಸೀಸ್)

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

    98 ಕೋಟಿ ರೂ. ಆಸ್ತಿಯನ್ನು ವಕ್ಫ್​ ಬೋರ್ಡ್​ಗೆ ಕೊಟ್ಟರೇ, ನಟ ದಿಲೀಪ್​ ಕುಮಾರ್? ವೈರಲ್ ಪೋಸ್ಟ್​ನ ಅಸಲಿಯತ್ತೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts