More

    ಮನೆಯಲ್ಲೇ ಕುಳಿತು 3Dಯಲ್ಲಿ ನೋಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್​..!

    ಬೆಂಗಳೂರು: ಬೆಂಗಳೂರಿನಲ್ಲಿ ಹೊಸತಾಗಿ ಉದ್ಘಾಟನೆ ಆಗಿರುವ 2ನೇ ಟರ್ಮಿನಲ್​ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇನ್ನು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿಲ್ಲ. ಇನ್ನು ಮನೆಯಲ್ಲೇ ಕುಳಿತು ವರ್ಚುವಲ್​ ಆಗಿ ವಿಮಾನ ನಿಲ್ದಾಣದ 3D ಮಾಡೆಲ್​​ಅನ್ನು ಕಣ್ತುಂಬಿಕೊಳ್ಳಬಹುದು!

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಮೆಜಾನ್, ಹಾಗೂ ಪಾಲಿಗಾನ್‌ ಸಹಯೋಗದಲ್ಲಿ ‘BLR ಮೆಟಾಪೋರ್ಟ್’ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಚಯಿಸಿದೆ. ಇದರ ಮತ್ತೊಂದು ವಿಶೇಷವೆಂದರೆ, BLR ಮೆಟಾಪೋರ್ಟಿನ ಮೂಲಕ 2ನೇ ಟರ್ಮಿನಲ್‌ಅನ್ನು 3ಡಿ ಅನುಭವದೊಂದಿಗೆ ವೀಕ್ಷಿಸಬಹುದಾಗಿದೆ.

    ಮೆಟಾವರ್ಸ್‌ ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡಲಿದೆ. 2ನೇ ಟರ್ಮಿನಲ್‌ನ ಸೌಂದರ್ಯವನ್ನು ವೀಕ್ಷಿಸಲು ಸಾಕಷ್ಟು ಪ್ರಯಾಣಿಕರು ಇಚ್ಚಿಸುತ್ತಾರೆ. ನೇರವಾಗಿ ಭೇಟಿ ನೀಡಲು ಅವಕಾಶವಿಲ್ಲದ್ದರೂ ಈ BLR ಮೆಟಾಪೋರ್ಟ್‌ನ ಮೂಲಕ 3D ಅನುಭವದೊಂದಿಗೆ ನೋಡಬಹುದಾಗಿದೆ. ಆಸಕ್ತ ಪ್ರಯಾಣಿಕರು ಮತ್ತು ಸಾರ್ವಜನಿಕರು www.blrmetaport.com ಗೆ ಲಾಗ್ಆನ್‌ ಆಗಬಹುದು.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ BLR ಮೆಟಾಪೋರ್ಟ್ ನನ್ನು ಮೊದಲ ಬಾರಿಗೆ ಪರಿಚಯಿಸಿದೆ. ಈ ಮೂಲಕ ಪ್ರಯಾಣಿಕರು ವಿಮಾನ ಯಾನದ ಸಂಪೂರ್ಣ ಅನುಭವವನ್ನು ಇದೀಗ ಕಂಪ್ಯೂಟರ್​ ಅಥವಾ ಮೊಬೈಲ್​ ಮೂಲಕ 3ಡಿ ಅನುಭವದಲ್ಲಿ ಪಡೆಯಬಹುದಾಗಿದೆ. ಈ BLR ಮೆಟಾಪೋರ್ಟ್‌ನ ಮೂಲಕ ಟರ್ಮಿನಲ್‌ಗಳನ್ನು ನ್ಯಾವಿಗೇಟ್‌ ಮಾಡುವುದು, ಶಾಪಿಂಗ್‌ ಮಾಡುವುದು, ಇತರ ಪ್ರಯಾಣಿಕರೊಂದಿಗೆ ಸಂಪರ್ಕ ಸಾಧಿಸುವುದು, ಹೀಗೆ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts