More

    ಸದ್ಯದಲ್ಲೇ ಹಲಾಲ್​​ಗೆ ಬ್ರೇಕ್​ ಹಾಕಲಿದೆಯಾ ಬಿಜೆಪಿ.?!

    ಬೆಂಗಳೂರು: ಎರಡು ತಿಂಗಳ ಹಿಂದೆ ಹಲಾಲ್ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಕಾರಿ ಕಚೇರಿ ಎದುರು ಹಿಂದು ಜನ ಜಾಗೃತಿ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದ್ದರು.

    ಹಲಾಲ್ ಉತ್ಪನ್ನಗಳಿಂದ ಭಾರತ ಅರ್ಥ ವ್ಯವಸ್ಥೆ ಹಾಳಾಗುತ್ತಿದೆ. ವಸ್ತುಗಳು ಹಲಾಲ್ ಮತ್ತು ನಾನ್ ಹಲಾಲ್ ಎಂದು ವರ್ಗೀಕರಣ ಮಾಡಿ ಪೂರೈಕೆಯಾಗಬೇಕು. ಈ ಹಲಾಲ್ ಕಡ್ಡಾಯ ಎಂಬುದನ್ನು ಸರ್ಕಾರ ರದ್ದುಪಡಿಸಬೇಕು. ಹಲಾಲ್ ಎಂದು ಪ್ರಮಾಣೀಕೃತಗೊಂಡಿರುವ ಉತ್ಪನ್ನಗಳನ್ನು ಜನರು ಖರಿದಿಸದೆ ಅಂಥ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹಿಂದು ಸಂಘಟನೆಗಳು ಆಗ್ರಹಿಸಿದ್ದವು.

    ಇದೀಗ ಹಿಂದು ಸಂಘಟನೆಗಳ ಬೇಡಿಕೆ ಈಡೇರಲಿದ್ದು ಖಾಸಗಿ ಸಂಸ್ಥೆಗಳು ಒಂದು ಧರ್ಮದ ಹಾಗು ಧಾರ್ಮಿಕ ಲೇಪನವುಳ್ಳ ಪ್ರಮಾಣ ಪತ್ರ ನೀಡುವಿಕೆಗೆ ಬ್ರೇಕ್ ಹಾಕಲು ಖಾಸಗಿ ವಿಧೇಯಕ ತರಲು ಬಿಜೆಪಿ ಮುಂದಾಗಿದೆ. ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಖಾಸಗಿ ವಿಧೇಯಕ ಮಂಡನೆಗೆ ಪರಿಷತ್ ಸದಸ್ಯ ರವಿಕುಮಾರ್ ಅವಕಾಶ ಕೋರಿದ್ದಾರೆ. ಈ ಬಗ್ಗೆ ಸಭಾಪತಿಗಳಿಗೆ ಪತ್ರವನ್ನೂ ಬರೆಯಲಾಗಿದೆ.

    ‘ಹಲಾಲ್ ಸಂಸ್ಥೆ ಕೋಆಪರೇಟಿವ್ ನಿಯಮದಡಿ ನೋಂದಣಿಯಾಗಿದೆ. ಈಗ ಈ ಸಂಸ್ಥೆಗೆ ಹಲಾಲ್ ಪ್ರಮಾಣ ಪತ್ರ ಕೊಡುವ ಅಧಿಕಾರ ಕೊಟ್ಟವರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ.

    ಅದರ ಜೊತೆಗೆ ಈ ಸಂಸ್ಥೆ ವ್ಯಾಪ್ತಿ ಏನು ಎನ್ನುವುದರ ಮೇಲೂ ಪ್ರಶ್ನೆ ಎದ್ದಿದೆ. ಹಲಾಲ್​ ಸರ್ಟಿಫಿಕೇಟ್​ಅನ್ನು ಮಾಂಸದ ಮೇಲಷ್ಟೇ ಹೇರಲಾಗಿಲ್ಲ. ಬದಲಾಗಿ ಆಸ್ಪತ್ರೆಗೆ ಸಂಬಂಧಿಸಿದ ಉಪಕರಣಗಳು, ಕಿರಾಣಿ ವಸ್ತುಗಳು ಹೀಗೆ ದಿನಬಳಕೆಯಲ್ಲಿರುವ ನೂರಾರು ಉತ್ಪನ್ನಗಳ ಮೇಲೆ ಹಲಾಲ್ ಮುದ್ರೆ ಇರುತ್ತೆ. ಇದರಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿದೆ.

    ಹಲಾಲ್ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. ಇದಕ್ಕಾಗಿ ನಾನು ಖಾಸಗಿ ವಿಧೇಯಕ ಮಂಡನೆಗೆ ಸಭಾಪತಿ ಬಳಿ ಅನುಮತಿ ಕೇಳಿದ್ದೇನೆ. ಆಹಾರ ಭದ್ರತಾ ಕಾಯ್ದೆ 2006 ಕ್ಕೆ ತಿದ್ದುಪಡಿ ತರಲು ಖಾಸಗಿ ವಿಧೇಯಕ ಮಂಡಿಸಲಿದ್ದೇನೆ’ ಎಂದು ಪರಿಷತ್​ ಸದಸ್ಯ ಹೇಳಿದ್ದಾರೆ.

    ಈ ಸಂದರ್ಭ ಪತ್ರಕರ್ತರು ‘ನಿಮ್ಮದೇ ಸರ್ಕಾರ ಇದೇ ಯಾಕೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ರವಿಕುಮಾರ್​, ‘ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಸಾಕಷ್ಟು ವಿಚಾರಗಳಿವೆ. ಸದನದಲ್ಲಿ ನಾನು ಈ ಬಗ್ಗೆ ಮಾತನಾಡುತ್ತೇನೆ’ ಎಂದಿದ್ದಾರೆ. ಒಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಸದ್ಯದಲ್ಲೇ ಹಲಾಲ್​ಗೆ ಬ್ರೇಕ್​ ಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts